Saturday, August 8, 2026

BDA Apartments

Home Crime ಹೆಲಿಕಾಪ್ಟರ್ ಪತನ:  5 ಮಂದಿ ಸಾವು: ಇಬ್ಬರಿಗೆ ಗಂಭೀರ ಗಾಯ

ಹೆಲಿಕಾಪ್ಟರ್ ಪತನ:  5 ಮಂದಿ ಸಾವು: ಇಬ್ಬರಿಗೆ ಗಂಭೀರ ಗಾಯ

ಉತ್ತರಕಾಶಿ, ಮೇ,8,2025 (www.justkannada.in):  ಹೆಲಿಕಾಪ್ಟರ್ ಪತನಗೊಂಡು 5 ಮಂದಿ ಪ್ರವಾಸಿಗರು ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಬಳಿ ಇಂದು ಬೆಳಿಗ್ಗೆ ಬಳಿ ಸಂಭವಿಸಿದೆ.

ಹೆಲಿಕಾಪ್ಟರ್‌ನಲ್ಲಿ ಸುಮಾರು 7 ಜನ ಇದ್ದರು ಎನ್ನಲಾಗಿದೆ. ತೀರ್ಥಯಾತ್ರಿಕರನ್ನ ಕರೆದೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.  ಯಮುನೋತ್ರಿಯಿಂದ ಗಂಗೋತ್ರಿಗೆ  ಪ್ರವಾಸಿಗರನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್ ಹೆಲಿಪ್ಯಾಡ್‌ಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ಪೊಲೀಸರು, ಸೇನಾ ಪಡೆ, ವಿಪತ್ತು ನಿರ್ವಹಣಾ ತಂಡ ಮತ್ತು ಆಂಬ್ಯುಲೆನ್ಸ್‌ ಗಳು ಉತ್ತರಕಾಶಿ ಬಳಿಯ ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ  ಮುಂದುವರೆಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Helicopter, crash, 5 dead, two seriously, injured