Tuesday, November 3, 2026

Dasara Wishes

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ Dasr...
Happy Dasara
Home Front Page ಹಾಲು, ವಿದ್ಯುತ್ ದರ ಏರಿಕೆ ಸಮರ್ಥಿಸಿಕೊಂಡ ಸಚಿವ ಹೆಚ್.ಕೆ ಪಾಟೀಲ್

ಹಾಲು, ವಿದ್ಯುತ್ ದರ ಏರಿಕೆ ಸಮರ್ಥಿಸಿಕೊಂಡ ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಮಾರ್ಚ್,28,2025 (www.justkannada.in):  ರಾಜ್ಯದಲ್ಲಿ ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನತೆಗೆ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇತ್ತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಬೆಲೆ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್  ಹಾಲಿನ ದರವನ್ನ 4 ರೂ. ಹೆಚ್ಚಳ ಮಾಡಲಾಗಿದ್ದು, ಹೆಚ್ಚಳ ಮಾಡಿರುವ 4 ರೂ ಅನ್ನು ರೈತರಿಗೆ ಕೊಡುತ್ತೇವೆ.  ಬೇರೆ ರಾಜ್ಯಕ್ಕೆ  ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ 5 ರೂ ಕಡಿಮೆ ಇದೆ ಎಂದರು.

ಹಾಗೆಯೇ  ವಿದ್ಯುತ್ ದರ ಏರಿಕೆಯೂ ಅನಿವಾರ್ಯವಾಗಿದೆ. ಬಡವರಿಗೆ ಉಚಿತ ಕೊಡುತ್ತೇವೆ. ಶ್ರೀಮಂತರಿಗೆ ಚಾರ್ಜ್ ಮಾಡುತ್ತೇವೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.

Key words: Minister, H.K. Patil, defends, milk, electricity, price hike