Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಟೆಸ್ಟ್ ಕ್ರಿಕೆಟ್: ಮುತ್ತಯ್ಯ ಮುರಳೀಧರ್ ದಾಖಲೆ ಸರಿಗಟ್ಟಿದ ಅಶ್ವಿನ್

ಟೆಸ್ಟ್ ಕ್ರಿಕೆಟ್: ಮುತ್ತಯ್ಯ ಮುರಳೀಧರ್ ದಾಖಲೆ ಸರಿಗಟ್ಟಿದ ಅಶ್ವಿನ್

ವಿಶಾಖಪಟ್ಟಣಂ, ಅಕ್ಟೋಬರ್ 06, 2019 (www.justkannada.in): ಟೀಂ ಇಂಡಿಯಾ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ದಾಖಲೆ ಸರಿಗಟ್ಟಿದ್ದಾರೆ.

ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದ ಅಶ್ವಿನ್, ಎದುರಾಳಿಗಳ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆಯುವ ಮೂಲಕ ಮುರಳೀಧರನ್ ಅವರ 350 ಟೆಸ್ಟ್ ವಿಕೆಟ್ ಗಳಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

33 ರ ಹರೆಯದ ಅವರು 66 ಟೆಸ್ಟ್ ಪಂದ್ಯಗಳಲ್ಲಿ 26 ಬಾರಿ ಐದು ವಿಕೆಟ್ ಗೊಂಚಲು ಗಳಿಕೆ ಸೇರಿದಂತೆ 350 ವಿಕೆಟ್ ಪಡೆದಿದ್ದಾರೆ.

ತನ್ನ ಹೆಸರಿಗೆ 800 ವಿಕೆಟ್‌ಗಳನ್ನು ಹೊಂದುವ ಮೂಲಕ ಟೆಸ್ಟ್ ಕ್ರಿಕೆಟ್‌ನ ಮುಂಚೂಣಿ ವಿಕೆಟ್‌ ಟೇಕರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾದ ಮುರಳೀಧರನ್, 2001 ರಲ್ಲಿ ಬಾಂಗ್ಲಾದೇಶ ವಿರುದ್ಧದ 66 ನೇ ಟೆಸ್ಟ್ ಪಂದ್ಯದಲ್ಲಿ 350 ವಿಕೆಟ್ ಮೈಲಿಗಲ್ಲು ತಲುಪಿದ್ದರು.