Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ದಸರಾ ಪಾಸ್ ಹಂಚಿಕೆ ಗೊಂದಲ: ಬೇಸರ ಬೇಡ, ವಾಡಿಕೆಯಂತೆ ಎಲ್ಲರಿಗೂ ಪಾಸ್ ತಲುಪಲಿವೆ ಎಂದ ವಿ.ಸೋಮಣ್ಣ

ದಸರಾ ಪಾಸ್ ಹಂಚಿಕೆ ಗೊಂದಲ: ಬೇಸರ ಬೇಡ, ವಾಡಿಕೆಯಂತೆ ಎಲ್ಲರಿಗೂ ಪಾಸ್ ತಲುಪಲಿವೆ ಎಂದ ವಿ.ಸೋಮಣ್ಣ

ಯಾದಗಿರಿ, ಅಕ್ಟೋಬರ್, 06, 2019 (www.justkannada.in): ದಸರಾ ಪಾಸ್ ವಿಚಾರದಲ್ಲಿ ಗೊಂದಲ ವಿಚಾರ‌ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ನನ್ನ ನೆಂಟರನ್ನ ಕರೆದುಕೊಂಡು ಬಂದಿಲ್ಲ. ಇರುವುದರಲ್ಲಿ ಎಲ್ಲವನ್ನು ಸರಿದೂಗಿಸುತ್ತಿದ್ದೇನೆ. ಮೈಸೂರಿನವರೇ ನನ್ನ ಬಂಧುಗಳು. ನಾನು 40 ದಿನದಿಂದ ಎಲ್ಲವನ್ನು ಓಡಾಡಿ ದಸರಾ ಮಾಡಿದ್ದೇನೆ. ಆದ್ರೆ ಕೊನೆ ದಿನಗಳಲ್ಲಿ ಪಾಸ್ ವಿಚಾರವಾಗಿ ಕೊಂಚ ಬೇಸರ ತರಿಸಿದೆ ಎಂದು ವಿ.ಸೋಮಣ್ಣ ಹೇಳಿದ್ದಾರೆ.

ಎಲ್ಲರು ಸುಮ್ಮನೆ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಸ್ಥಳಿಯರಿಗಿಂತ ಹೊರ ರಾಜ್ಯ ಹೊರ ದೇಶವರಿಗೆ ಅವಕಾಶ ಮಾಡಿಕೊಡೋಣ. ಪಾಲಿಕೆ ಸದಸ್ಯರು ನನ್ನೊಂದಿಗೆ ಮಾತನಾಡಬಹುದಿತ್ತು. ಅವರುಗಳು ಪ್ರತಿಭಟನೆ ಮಾಡುವ ಅವಶ್ಯಕತೆ ಇರಲಿಲ್ಲ‌. ವಾಡಿಕೆಯಂತೆ ಎಲ್ಲರಿಗು ಪಾಸ್ ತಲುಪಲಿದೆ‌ ಎಂದು ಹೇಳಿದ್ದಾರೆ.