Friday, August 14, 2026

BDA Apartments

Home Front Page ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆ

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆ

ಬೆಳಗಾವಿ,ಮಾರ್ಚ್,15,2025 (www.justkannada.in):  ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಮಂಗೇಶ್ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆಯಾದರು.

ಚುನಾವಣಾಧಿಕಾರಿ ಕೈ ಎತ್ತಿವ ಮೂಲಕ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 5 ಮತಗಳು ಹಾಗೂ ವಾಣಿ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 19ಮತಗಳು ಬಂದಿದ್ದವು.

ಮರಾಠಿಗರಾದ ಮಂಗೇಶ 41ನೇ ವಾರ್ಡಿನ ಸದಸ್ಯ, ಕನ್ನಡತಿಯಾದ ವಾಣಿ ಅವರು 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ. ಈ ಮೂಲಕ 40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ‌ಯ ಚುಕ್ಕಾಣಿ ‌ಹಿಡಿಯಿತು.

Key words: Belgaum Municipal Corporation, Mayor, Election