Saturday, September 5, 2026

BDA Apartments

Home Front Page ಗ್ಯಾರಂಟಿ ಅನುಷ್ಟಾನ ಸಮಿತಿಯ ‘ಕೈ’ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ: ರಾಜ್ಯಪಾಲರಿಗೆ ದೂರು- ಬಿ.ವೈ ವಿಜಯೇಂದ್ರ

ಗ್ಯಾರಂಟಿ ಅನುಷ್ಟಾನ ಸಮಿತಿಯ ‘ಕೈ’ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ: ರಾಜ್ಯಪಾಲರಿಗೆ ದೂರು- ಬಿ.ವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,12, 2025 (www.justkannada.in): ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಶಾಸಕರ ಮಕ್ಕಳನ್ನ ಕಾಂಗ್ರೆಸ್ ಪುಡಾರಿಗಳನ್ನ ನೇಮಿಸಿದ್ದಾರೆ ಇದನ್ನ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ರಾಜ್ಯ ಸರ್ಕಾರದ ನಡೆ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಗುಡುಗಿದರು.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ,  ಶಿಕ್ಷಕರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ಭತ್ಯೆ ನೀಡಲು ಸರ್ಕಾರದ ಬಳಿ ಹಣವಿದೆ.

ಶಾಸಕರ ಮಕ್ಕಳನ್ನ  ಕಾಂಗ್ರೆಸ್  ಪುಡಾರಿಗಳನ್ನ ಗ್ಯಾರಂಟಿ ಅನುಷ್ಟಾನ ಸಮಿತಿಗೆ ನೇಮಿಸಿದ್ದಾರೆ. ಇದನ್ನ ಖಂಡಿಸುತ್ತೇನೆ ಸರ್ಕಾರದ ಕ್ರಮ ಖಂಡಿಸಿ ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

Key words: Government, salary, congress workers, Guarantee, Implementation, B.Y. Vijayendra