Friday, August 14, 2026

BDA Apartments

Home Front Page ದಾಸಸಾಹಿತ್ಯ ರಚನೆಯಲ್ಲಿ ಪುರಂದರದಾಸರು ಅಗ್ರಗಣ್ಯರು- ವಿಕ್ರಂ ಅಯ್ಯಂಗಾರ್

ದಾಸಸಾಹಿತ್ಯ ರಚನೆಯಲ್ಲಿ ಪುರಂದರದಾಸರು ಅಗ್ರಗಣ್ಯರು- ವಿಕ್ರಂ ಅಯ್ಯಂಗಾರ್

ಮೈಸೂರು,ಜನವರಿ,30,2025 (www.justkannada.in): ನಾಡಿನ ಸಮಗ್ರ ದಾಸಸಾಹಿತ್ಯ ರಚನೆಯಲ್ಲಿ ಪುರಂದರ ದಾಸರು ಅಗ್ರಗಣ್ಯರು. ಅವರು ರಚಿಸಿದ ಪ್ರತಿಯೊಂದು ಹಾಡುಗಳು ನಮ್ಮ ಜೀವನವನ್ನು ಬದಲಿಸಬಲ್ಲದು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.

ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಗರದ ಯಾದವಗಿರಿಯಲ್ಲಿರುವ ಶ್ರೀ ಉತ್ತರಾದಿ ಮಠ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಂದರ ದಾಸರ ಜೀವನ ಚರಿತ್ರೆ ಕುರಿತು ಮಾತನಾಡಿದರು.

15ನೇ ಶತಮಾನದಲ್ಲಿ ಅವತರಿಸಿದ ಪುರಂದರ ದಾಸರು ಸಾಕ್ಷಾತ್ ನಾರದ ಮಹರ್ಷಿಗಳ ಅವತಾರವೆಂದು ಪುರಾಣಗಳು ನಮಗೆ ತಿಳಿಸಿಕೊಡುತ್ತವೆ. ಪುರಂದರದಾಸರು ತಮ್ಮ ಜೀವಿತಾವಧಿಯವರೆಗೂ ನಾಡಿನ ಪ್ರತಿಯೊಂದು ಊರುಗಳಿಗೆ ಸಂಚರಿಸಿ ಪ್ರತಿಯೊಂದು ಸಮಾಜವನ್ನು ಉದ್ಧಾರ ಮಾಡಿದ ಮಹಾನ್ ಸಮಾಜ ಸುಧಾರಕ. ಸುಮಾರು 4 ಲಕ್ಷ 7 ಸಾವಿರ ದಾಸರ ಕೀರ್ತನೆಗಳನ್ನು ರಚಿಸಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಮಾನುಜ ಅಬ್ಯುದಯ ಸಹಕಾರ ಸಂಘದ ಅಧ್ಯಕ್ಷ ಎಚ್. ಕೆ ರಾಜಗೋಪಾಲ್  ಎಸ್ ಬಿ ವಾಸುದೇವಮೂರ್ತಿ, ಪ್ರಮೋದ್ ಆಚಾರ್, ನಾಗಭೂಷಣ್ ಆಚಾರ್, ಅನಂತ ಕೃಷ್ಣ, ಹೊಯ್ಸಳ ಕರ್ನಾಟಕ ನಿರ್ದೇಶಕರಾದ ರಂಗನಾಥ್, ಸುಚೇಂದ್ರ, ಶ್ರೀನಿವಾಸ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: Purandaradasa, foremost, literature, Vikram Iyengar, mysore