Saturday, August 8, 2026

BDA Apartments

Home Front Page ಸುಗ್ರೀವಾಜ್ಞೆ ಮೂಲಕ ಬೆಂಗಳೂರು ಅರಮನೆ ವಶಕ್ಕೆ ಸರ್ಕಾರ ಯತ್ನ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಅರಸು...

ಸುಗ್ರೀವಾಜ್ಞೆ ಮೂಲಕ ಬೆಂಗಳೂರು ಅರಮನೆ ವಶಕ್ಕೆ ಸರ್ಕಾರ ಯತ್ನ: ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಅರಸು ಮಂಡಳಿ

ಮೈಸೂರು,ಜನವರಿ,30,2025 (www.justkannada.in): ಬೆಂಗಳೂರು ಅರಮನೆಯನ್ನು ಸುಗ್ರೀವಾಜ್ಞೆ ಮೂಲಕ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು  ಅರಸು ಮಂಡಳಿ ತೀವ್ರವಾಗಿ ಖಂಡಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅರಸು ಮಂಡಳಿ ಸಂಘದ ಅಧ್ಯಕ್ಷ ಮನೋಜ್ ಅರಸು, ಮೈಸೂರು ರಾಜವಂಶಸ್ಥರನ್ನ ಸರ್ಕಾರ ಪದೇ ಪದೇ ಗುರಿಯಾಗಿಸಿಕೊಂಡು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ನಮ್ಮ ಸಮುದಾಯ ಕಡಿಮೆ ಜನ ಸಂಖ್ಯೆ ಇದೆ. ಸಂವಿಧಾನದಲ್ಲಿ ಯಾವುದೇ ಒಂದು ಆಸ್ತಿಯನ್ನು ವಶಪಡಿಸಿಕೊಳ್ಳಬೇಕಾದರೆ ಸೂಕ್ತ ಪರಿಹಾರ ನೀಡಿ ವಶಪಡಿಸಿಕೊಳ್ಳಬೇಕು ಎಂದು ಹೇಳಿದೆ. ಆದರೆ ಸುಗ್ರೀವಾಜ್ಞೆ ಮೂಲಕ ರಾಜಮನೆತನದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುಲು ಸರ್ಕಾರ ಮುಂದಾದಮಗಿದೆ. ಟಿಡಿಆರ್ ನೀಡದೆ ವಶಪಡಿಸಿಕೊಳ್ಳಲು ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.

ಪ್ರಬಲ ಸಮುದಾಯ ಅಥವಾ ಬಹುಸಂಖ್ಯಾತರಾಗಿದ್ದರೆ  ಸರ್ಕಾರ ಈ ರೀತಿ ಮಾಡುತ್ತಿರಲಿಲ್ಲ. ನಮ್ಮ ಸಮುದಾಯದ ಜನ ಸಂಖ್ಯೆ ಬಹಳ ಕಡಿಮೆ ಇದೆ‌. ಇವರೇನು ಮಾಡೋಕೆ ಆಗುತ್ತೆ ಎಂದು ನಮ್ಮ ಮೇಲೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ ರಾಜ್ಯಕ್ಕೆ ಮೈಸೂರು ಅರಸ ಕೊಡುಗೆ ಅಪಾರ. ಅವರ ಮಾಡಿರು  50% ಕೆಲಸವನ್ನು ಈಗಿರುವ ಸರ್ಕಾರಗಳು ಮಾಡಿಲ್ಲ. ಹಾಗಾಗಿ ಸುಗ್ರೀವಾಜ್ಞೆಯನ್ನ ಸಿಎಂ ಸಿದ್ದರಾಮಯ್ಯ ಅವರು ವಾಪಸ್ ಪಡೆಯಬೇಕು. ಇಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮನೋಜ್ ಅರಸು ಎಚ್ಚರಿಕೆ ನೀಡಿದರು.

Key words: Government, Bengaluru Palace, ordinance, Royal Council, warns