Thursday, October 15, 2026

Dasara Wishes

Happy Dasara
Home Front Page ಜಿಲ್ಲಾಧಿಕಾರಿಗೆ ಏಕವಚನ ಬಳಕೆ: ದುರಹಂಕಾರ ನಡೆ ಸರಿಯಲ್ಲ:  ಸಿಎಂ ವಿರುದ್ದ ಹೆಚ್.ವಿಶ್ವನಾಥ್ ವಾಗ್ದಾಳಿ

ಜಿಲ್ಲಾಧಿಕಾರಿಗೆ ಏಕವಚನ ಬಳಕೆ: ದುರಹಂಕಾರ ನಡೆ ಸರಿಯಲ್ಲ:  ಸಿಎಂ ವಿರುದ್ದ ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು,ಜನವರಿ,16,2025 (www.justkannada.in): ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾಲೂಕಿನ ಬಂಡಹಳ್ಳಿಯಲ್ಲಿ ನಡೆದ ಮಾಜಿ ಶಾಸಕ ಸಿರಾಜ್ ಶೇಖರ್ ಅವರ ಮಗನ ಜೊತೆ  ಸರ್ವ ಧರ್ಮ ಸಾಮೂಹಿಕ ವಿವಾಹ  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಏಕವಚನ ಬಳಸಿ ನಿಂದನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗೋಷ್ಠಿ ಮಾತನಾಡಿದ ಹೆಚ್.ವಿಶ್ವನಾಥ್,  ಒಬ್ಬ ಐಎಎಸ್ ಅಧಿಕಾರಿಗೆ ಏಕವಚನದಲ್ಲಿ ಬೈದು ಅಲ್ಲಿಂದ ಎದ್ದು ಹೋಗು ಎಂದು  ಹೇಳಿರುವುದು ಖಂಡನೀಯ. ಸಿದ್ದರಾಮಯ್ಯ ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವುದು  ಅಭ್ಯಾಸ ಮಾಡಿಕೊಂಡಿದ್ದಾರೆ. ನಿಮ್ಮ ದುರಹಂಕಾರ ನಡೆ ಸರಿಯಲ್ಲ ಉತ್ತಮ ಆಡಳಿತ ಕೊಟ್ಟು ದುರಹಂಕಾರ ತೋರಿಸಿ. ದೇವರಾಜ ಅರಸು ಅವರಿಗಿಂತ ದೊಡ್ಡ ಲೀಡರಲ್ಲಪ್ಪ‌ ನೀನು ದುರಹಂಕಾರದಿಂದ ನಡೆದುಕೊಳ್ಳುವುದನ್ನು ಮುಂದಾದರೂ ಬಿಡಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕೂಯ್ದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾವು ಪೂಜೆ ಮಾಡುವ ದೇವರು ಅದರ ಕೆಚ್ಚಲು ಕೂಯ್ದಿರುವುದು ಬಹಳ ಖಂಡನೆ. ಯಾವ ಆಡಳಿತ ಕೊಡುತ್ತಿದ್ದೀರಾ? ಮೈಸೂರು ಮುಡಾ ಪ್ರಕರಣದಲ್ಲಿ ಲೂಟಿ ಮಾಡಿದ್ದ ಆ ಇಬ್ಬರು ಆಯುಕ್ತರನ್ನ ನೀವು ಮುಟ್ಟಲಿಕ್ಕೆ ಆಗಲಿಲ್ಲ. ಅವರ ವಿರುದ್ಧ ಏನು ಕ್ರಮ ತಗೆದುಕೊಂಡಿರಿ?  ಎರಡು ವರ್ಷಗಳ ಕಳೆಯುತ್ತಿದೆ  ಸಿಎಂ ಆಗಿ ರಾಜ್ಯಕ್ಕೆ ಏನ್ ಮಾಡಿದ್ದೀರಾ? ಎಂದು ಕಿಡಿಕಾರಿದರು.

ಜಾತಿಗಣತಿ ವರದಿ ಬಿಡುಗಡೆ ಆಗ್ರಹಿಸಿದ ಎಂಎಲ್ಸಿ ವಿಶ್ವನಾಥ್, ಜಾತಿಗಣತಿ ತಯಾರಾಗಿ 10 ವರ್ಷ ಆಗಿದೆ. ಇಲ್ಲಿ ತನಕ ಅದನ್ನು ಮುಟ್ಟಿಯೂ ನೋಡಿಲ್ಲ. ಜಾತಿ ಗಣತಿ ಮತ್ತು ಅಹಿಂದ ನಿಮಗೆ ಒಂದು ಅಸ್ತ್ರ ಅಷ್ಟೇನೆ. ಅದನ್ನ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದೀರಾ.? ನಿಮ್ಮದು ಹೇಡಿತನ ಅನ್ನೋದನ್ನ ತೋರಿಸುತ್ತೆ. ಕೂಡಲೇ ಜಾತಿಗಣತಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

Key words: H. Vishwanath, CM Siddaramaiah, Arrogant behavior