Sunday, August 23, 2026

BDA Apartments

Home Front Page ನಿಂದನೆ ವಿಚಾರ: ಡಿಸಿಎಂ ಲಕ್ಷ್ಮಣ್ ಸವದಿಗೆ ತಿರುಗೇಟು ನೀಡಿದ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

ನಿಂದನೆ ವಿಚಾರ: ಡಿಸಿಎಂ ಲಕ್ಷ್ಮಣ್ ಸವದಿಗೆ ತಿರುಗೇಟು ನೀಡಿದ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ…

ಬೆಳಗಾವಿ,ಸೆ,28,2019(www.justkannada.in):  ತಮ್ಮ ವಿರುದ್ದ ಅವಾಚ್ಯ ಶಬ್ದ ಬಳಸಿದ ಡಿಸಿಎಂ ಲಕ್ಷ್ಮಣ್ ಸವದಿಗೆ ಅನರ್ಹ ಶಾಸಕ ಮಹೇಶ ಕುಮುಟಳ್ಳಿ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ  ಮಾತನಾಡಿದ ಅನರ್ಹ ಶಾಸಕ ಮಹೇಶ ಕುಮುಟಳ್ಳಿ, ಲಕ್ಷ್ಮಣ ಸವದಿ ನನ್ನ ತಾಯಿಯ ಬಗ್ಗೆ ಬಳಸಿದ ಶಬ್ದ ಕೇಳಿ ನನಗೆ ನೋವಾಯ್ತು. ಯಾರಿಗಾದರೂ ನೋವಾಗುತ್ತೆ. ಡಿಸಿಎಂ ಲಕ್ಷ್ಮಣ ಸವದಿ ಜವಾಬ್ದಾರಿ ಸ್ಥಾನದಲ್ಲಿದ್ದವರು ಹೀಗೆ ಮಾತನಾಡಬಾರದು, ನಾನು ಉತ್ತರ ಕರ್ನಾಟಕದವನು ನನಗೂ ಎಲ್ಲ ಭಾಷೆ ಗೊತ್ತಿದೆ ಎಂದು ಟಾಂಗ್ ನೀಡಿದರು.

ನಾನು ಬೇರೆ ಕುಮುಟಳ್ಳಿ ಬಗ್ಗೆ ಮಾತನಾಡಿದ್ದು ಎಂಬ ಲಕ್ಷ್ಮಣ ಸವದಿ ಹೇಳಿಕೆಗೆ  ತಿರುಗೇಟು ನೀಡಿದ ಮಹೇಶ್ ಕುಮುಟಳ್ಳಿ, ಸವದಿ ಹೇಳಿದ್ದನ್ನ ನೀವೆ ವಿಶ್ಲೇಷಿಸಿ, ಅವರು ಹೇಳಿದ ಹಾಗೇ ಮತ್ತೊಬ್ಬ ಕುಮಟೊಳ್ಳಿ ಕುಡಕನಾಗಿದ್ರೆ ಅವನು ಹೇಗೆ ಮಾತಾಡಬಾರದು. ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ನಾನು ಹಾಗೇ ಮಾತಾಡಲ್ಲ ಎಂದರು.

ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ಕುರಿತು ಪ್ರತಿಕ್ರಿಯಿಸಿದ ಮಹೇಶ್ ಕುಮುಟಳ್ಳಿ, ನಮ್ಮ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದ್ದು ತೀರ್ಪು ಬರೋವರೆಗೂ ಯಾವುದೇ ನಿರ್ಣಯ ತಗೋಳಲ್ಲ ಎಂದರು.

Key words: Abuse-Mahesh Kumutalli- gave –tong-DCM Laxman savadi.