Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Crime ಫೋನ್ ಪೇ ಮೂಲಕ ಲಂಚ ಪಡೆದ ಆರೋಪ: ಮೂವರು ಅಧಿಕಾರಿಗಳ ವಿರುದ್ದ ದೂರು ದಾಖಲು

ಫೋನ್ ಪೇ ಮೂಲಕ ಲಂಚ ಪಡೆದ ಆರೋಪ: ಮೂವರು ಅಧಿಕಾರಿಗಳ ವಿರುದ್ದ ದೂರು ದಾಖಲು

ಫೋನ್ ಪೇ ಮೂಲಕ ಲಂಚ ಪಡೆದ ಆರೋಪ: ಮೂವರು ಅಧಿಕಾರಿಗಳ ವಿರುದ್ದ ದೂರು ದಾಖಲು puliyogare,a...

ಮೈಸೂರು,ನವೆಂಬರ್,25,2024 (www.justkannada.in):  ಫೋನ್ ಪೇ ಮೂಲಕ ಲಂಚ ಪಡೆದು ಸಿಕ್ಕಿಬಿದ್ದ ಮೈಸೂರಿನ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಹೆಚ್.ಡಿ.ಕೋಟೆ ತಾಲೂಕು ತಹಶಿಲ್ದಾರ್ ಶ್ರೀನಿವಾಸ್, ಅಂತರಸಂತೆ ನಾಡಕಚೇರಿಯ ರೆವಿನ್ಯು ಇನ್ಸ್ ಪೆಕ್ಟರ್ ಗೋವಿಂದರಾಜು, ಎನ್.ಬೆಳ್ತೂರು ಗ್ರಾಮ ಲೆಕ್ಕಿಗ ನಾಗರಾಜು ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗಿದೆ.

ಹೆಚ್.ಡಿ.ಕೋಟೆಯ ಬಿ.ವಿ.ಮಮತಾ ಕುಮಾರಿ ಎಂಬವವರ ಬಳಿ ಅಧಿಕಾರಿಗಳು  50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಗುಂಡತ್ತೂರು ಗ್ರಾಮದ ಸರ್ವೆ ನಂ‌10 ರ 5 ಎಕರೆ 1 ಗುಂಟೆ ಭೂಮಿ‌ ವಿಚಾರ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಧಿಕಾರಿಗಳು ಆಸ್ತಿ ಪರಭಾರೆ ಮಾಡಿದ್ದು, ಆಸ್ತಿ ಹಂಚಿಕೆ ಮಾಡಿ ಮಾರಾಟ ಮಾಡಲು ಅನುವು , ಬಳಿಕ ಹಿಂದಿನಂತೆ ದಾಖಲೆಗಳ ಯಥಾಸ್ಥಿತಿ ಕಾಪಾಡಿಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ನಡುವೆ ಮೊದಲ ಹಂತವಾಗಿ 5 ಸಾವಿರ ಫೋನ್ ಪೇ ಮೂಲಕ ಲಂಚ ಪಡೆದಿದ್ದು ರೆಡ್ ಹ್ಯಾಂಡಾಗಿಯೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿರುವ ಅಧಿಕಾರಿಗಳ ವಿರುದ್ದ ದೂರು ದಾಖಲಾಗಿದೆ.

Key words: Complaint, officials, bribe, PhonePe, mysore