• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Monday, June 16, 2025
Sign in
Welcome! Log into your account
Forgot your password? Get help
Create an account
Privacy Policy
Create an account
Welcome! Register for an account
A password will be e-mailed to you.
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಮುಡಾ ಕೇಸ್: ಇಂದು ವರದಿ ಸಲ್ಲಿಕೆ: ನಾಳೆ ಸಿಎಂ ಪಾಲಿಗೆ ಬಿಗ್ ಡೇ
  • Front Page
  • News
  • Politics

ಮುಡಾ ಕೇಸ್: ಇಂದು ವರದಿ ಸಲ್ಲಿಕೆ: ನಾಳೆ ಸಿಎಂ ಪಾಲಿಗೆ ಬಿಗ್ ಡೇ

By
prashanth
-
2024-11-25
Facebook
Twitter
Pinterest
WhatsApp

    ಮೈಸೂರು,ನವೆಂಬರ್,25,2024 (www.justkannada.in): ಮುಡಾ 50:50 ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಇಂದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪ್ರಕರಣ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಕೋರ್ಟ್ ನಾಳೆಗೆ ಡೆಡ್ ಲೈನ್ ನೀಡಿದ್ದು ಲೋಕಾಯುಕ್ತ ಎಸ್ ಪಿ ಉದೇಶ್ ಇಂದೇ ಬೆಂಗಳೂರಿಗೆ ತೆರಳಿ ವರದಿ ಸಲ್ಲಿಸಲಿದ್ದಾರೆ

    ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಲಿರುವ ಲೋಕಾಯುಕ್ತ ಎಸ್ಪಿ ಉದೇಶ್  ಸುಮಾರು 400 ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಕೆ ಮಾಡಲಿದ್ದಾರೆ.

    ವರದಿಯಲ್ಲಿ A1 ಆರೋಪಿ ಸಿದ್ದರಾಮಯ್ಯ, A2 ಆರೋಪಿ ಬಿ.ಎನ್.ಪಾರ್ವತಿ, A3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ , A4 ಆರೋಪಿ ದೇವರಾಜು ಅವರ ಸಮಗ್ರ ವಿಚಾರಣಾ ವರದಿ, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ, ಕೆಸರೆ ಸರ್ವೆ ನಂಬರ್ 464 ರ 3.16 ಎಕರೆ ಭೂಮಿ‌ ಸರ್ವೆ, ವಿಜಯನಗರದ 14 ಸೈಟ್ ಗಳ ಸರ್ವೆ ಕಾರ್ಯ, ಈ ಹಿಂದೆ ಸಚಿವರಾಗಿದ್ದ ಬಚ್ಚೇಗೌಡರ ವಿಚಾರಣಾ‌ ವರದಿ, ಹಿಂದಿನ ಆಯುಕ್ತರಾದ ನಟೇಶ್, ಪಾಲಯ್ಯ ಅವರ ಹೇಳಿಕೆ , ಹಿಂದಿನ ಅಧ್ಯಕ್ಷರಾದ ದ್ರುವಕುಮಾರ್ ಅವರಿಗೆ ನೀಡಿರುವ ನೋಟಿಸ್ ಉಲ್ಲೇಖ, ಹಿಂದೆ ಮುಡಾದಲ್ಲಿ ಕೆಲಸ ಮಾಡಿರುವ ಅಧಿಕಾರಿಗಳ ವಿಚಾರಣೆ, ಮುಡಾದಲ್ಲಿ ದಾಖಲೆಗಳ ಸಂಗ್ರಹದ ವರದಿ, ದೂರುದಾರ ಹಾಗೂ ಮುಡಾದ ದಾಖಲೆಗಳ ಪರಿಶೀಲನಾ ವರದಿ, ಪರಿಶೀಲನಾ ಬಳಿಕ ವರದಿಗಳ ಸತ್ಯಾಸತ್ಯತೆ ಶೋಧನಾ ಕಾರ್ಯದ ಮಾಹಿತಿ, ಅಧಿಕಾರಿಗಳು ಈವರಗೆ ನಡೆಸಿರುವ ವಿಚಾರಣೆ, ತನಿಖೆಯ ವರದಿಯನ್ನು ನ್ಯಾಯಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಸಿದ್ದರಾಮಯ್ಯಗೆ ಬಿಗ್ ಡೇ ಆಗಲಿದ್ದು, ಲೋಕಾಯುಕ್ತರು ನೀಡುವ ವರದಿ ಸಿಎಂಗೆ ಪಾಲಿಗೆ ವರವಾಗುತ್ತಾ? ಮುಳುವಾಗುತ್ತಾ ಕಾದು ನೋಡಬೇಕಿದೆ.  ನಾಳೆಯೂ ಕೂಡ ಮೈಸೂರು  ಲೋಕಾಯುಕ್ತ ಎಸ್ಪಿ ಉದೇಶ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ನ್ಯಾಯಾಧೀಶರು ಕೇಳುವ ಪ್ರಶ್ನೆಗೆ ಉತ್ತರಿಸಬೇಕಾದ ಅನಿವಾರ್ಯತೆ ಇದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಜೊತೆಗೆ ಎಸ್ಪಿ ಕೂಡ ಹಾಜರಿರಲಿದ್ದಾರೆ.

    ನ್ಯಾಯಾಲಯಕ್ಕೆ ಸಲ್ಲಿಸುವ ವರದಿ ಕುರಿತು ಎಸ್ ಪಿ ಉದೇಶ್ ವಿವರಿಸಲಿದ್ದು,  ನ್ಯಾಯಾಧೀಶರ ಅನುಮಾನಗಳು, ಪ್ರಶ್ನೆಗಳಿಗೆ ಎಸ್ಪಿ ಉದೇಶ್ ಖುದ್ದು ಉತ್ತರ ನೀಡಲಿದ್ದಾರೆ.

    Key words: Muda case, Report, submitted, today, CM Siddaramaiah

    • TAGS
    • CM Siddaramaiah
    • Muda case
    • Report
    • submitted
    • Today
    Facebook
    Twitter
    Pinterest
    WhatsApp
      Previous articleವಿಪಕ್ಷಗಳ ಆರೋಪಗಳು ಸುಳ್ಳು ಎಂದು ಜನತಾ ‍ನ್ಯಾಯಲಯದಿಂದ ತೀರ್ಪು- ಸಚಿವ ಭೈರತಿ ಸುರೇಶ್
      Next articleಫೋನ್ ಪೇ ಮೂಲಕ ಲಂಚ ಪಡೆದ ಆರೋಪ: ಮೂವರು ಅಧಿಕಾರಿಗಳ ವಿರುದ್ದ ದೂರು ದಾಖಲು
      prashanth

      RELATED ARTICLESMORE FROM AUTHOR

      ಸಿಎಂ ಸಿದ್ದರಾಮಯ್ಯ ಕಾರು ತಡೆದು ರೈತರಿಂದ ಆಕ್ರೋಶ

      FSSAI ನೋಂದಣಿ, ಪರವಾನಗಿ ನವೀಕರಣ ಹೆಸರಲ್ಲಿ ವಂಚನೆ: ಎಚ್ಚರವಹಿಸುವಂತೆ ಸೂಚನೆ

      ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ,  ಆರ್ಥಿಕ ಸಮೀಕ್ಷೆ ಕೈಗೊಳ್ಳುತ್ತಿಲ್ಲ- ಸಿಎಂ ಸಿದ್ದರಾಮಯ್ಯ

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      2025-02-13

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      2025-02-11

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      2025-02-11

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      2020-03-30

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      2019-06-16

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      2021-01-05

      POPULAR CATEGORY

      • Front Page42979
      • News42963
      • Politics25077
      • Crime3937
      • Cinema3523
      • Sports1334
      • Tenders426
      • Media Masala368
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout