Sunday, August 23, 2026

BDA Apartments

Home Front Page ಪ್ರೊಫೆಷನಲ್ ಟ್ಯಾಕ್ಸ್ ಕಾಯ್ದೆ ರದ್ದತಿಗೆ ಆಗ್ರಹ: ಮೈಸೂರಿನಲ್ಲಿ ವಕೀಲರ ಪ್ರತಿಭಟನೆ.

ಪ್ರೊಫೆಷನಲ್ ಟ್ಯಾಕ್ಸ್ ಕಾಯ್ದೆ ರದ್ದತಿಗೆ ಆಗ್ರಹ: ಮೈಸೂರಿನಲ್ಲಿ ವಕೀಲರ ಪ್ರತಿಭಟನೆ.

ಮೈಸೂರು,ನವೆಂಬರ್,20,2024 (www.justkannada.in): ಪ್ರೊಫೆಷನಲ್ ಟ್ಯಾಕ್ಸ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಮೈಸೂರಿನಲ್ಲಿ ವಕೀಲರು ಕೋರ್ಟ್ ಕಾರ್ಯ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ನೇತೃತ್ವದಲ್ಲಿ ನಗರದ ಹಳೆ ಕೋರ್ಟ್ ಮುಂಭಾಗ ಗಾಂಧಿ ಪ್ರತಿಮೆ ಬಳಿ ವಕೀಲರು ಪ್ರತಿಭಟನೆ ನಡೆಸಿದರು. ವೃತ್ತಿ ತೆರಿಗೆ ಪಾವತಿ ನೀತಿಯನ್ನ ಕೈ ಬಿಡಬೇಕು. ಜೊತೆಗೆ ರಾಜ್ಯದ ರೈತರಲ್ಲಿ ಆತಂಕ ಮೂಡಿಸಿರುವ ವಕ್ಫ್ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.  ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸುಧೀರ್, ಉಪಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ನೂರಾರು ವಕೀಲರು ಭಾಗಿಯಾಗಿದ್ದರು.

Key words: Lawyers,  protest, Mysore, Professional Tax Act