Sunday, August 23, 2026

BDA Apartments

Home Front Page ಮುಡಾ ಕೇಸ್: ಎಲ್ಲಾ ಮಾಹಿತಿ ನೀಡಿದ್ದೇನೆ, ಮತ್ತೆ ಕರೆದರೆ ಹಾಜರು-ಮುಡಾ ಮಾಜಿ ಆಯುಕ್ತ ಪಾಲಯ್ಯ

ಮುಡಾ ಕೇಸ್: ಎಲ್ಲಾ ಮಾಹಿತಿ ನೀಡಿದ್ದೇನೆ, ಮತ್ತೆ ಕರೆದರೆ ಹಾಜರು-ಮುಡಾ ಮಾಜಿ ಆಯುಕ್ತ ಪಾಲಯ್ಯ

ಮೈಸೂರು,ನವೆಂಬರ್,20,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಅಧಿಕಾರಿಗಳು ಇಂದು ಮುಡಾ ಮಾಜಿ ಆಯುಕ್ತ  ಪಾಲಯ್ಯ ಅವರನ್ನ ವಿಚಾರಣೆ ನಡೆಸಿದ್ದಾರೆ.

ಸಿದ್ದರಾಮಯ್ಯ ಪತ್ನಿಗೆ ಮುಡಾದಿಂದ ಅಕ್ರಮವಾಗಿ ಬದಲಿ ನಿವೇಶನ ಆರೋಪ ಸಂಬಂಧ ಇಂದು ವಿಚಾರಣೆಗಾಗಿ ಮುಡಾ ಮಾಜಿ ಆಯುಕ್ತ ಪಾಲಯ್ಯ  ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು.

ಇಂದು ಲೋಕಾಯಕ್ತ ವಿಚಾರಣೆ ಎದುರಿಸಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪಾಲಯ್ಯ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಟಪಾಲಿನ ಮೂಲಕ ಮನವಿ ನೀಡಿದ್ದರು ಆಗ ನಾನೇ ಮುಡಾದ ಆಯುಕ್ತನಾಗಿದ್ದೆ. ಎರಡನೇ ಬಾರಿ ಮಾಹಿತಿ ಪಡೆಯಲು ಕರೆದಿದ್ದರು ಈ ಹಿನ್ನೆಲೆಯಲ್ಲಿ ಬಂದಿದ್ದೆ. ಮೊದಲ ಬಾರಿ ಜಮೀನಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು. ಆಗ ನಾನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಯಾಗಿದ್ದೆ. ಈಗ ಮುಡಾಗೆ ಸಂಬಂಧಪಟ್ಟ ಮಾಹಿತಿ ಪಡೆಯಲು ಕರೆದಿದ್ದರು. ಎಲ್ಲಾ ಮಾಹಿತಿ ನೀಡಿದ್ದೇನೆ ಮತ್ತೆ ಕರೆದರೆ ಬರುತ್ತೇನೆ. ಒಬ್ಬ ಅಧಿಕಾರಿಯಾಗಿ ತನಿಖಾ ಸಂಸ್ಥೆಗೆ ಮಾಹಿತಿ ನೀಡುವುದು ನನ್ನ ಜವಾಬ್ದಾರಿ ಎಂದರು.

Key words: Muda case- Former Muda Commissioner, Palaiah