Sunday, August 23, 2026

BDA Apartments

Home Front Page ನನ್ನನ್ನ ಮುಟ್ಟಿದ್ರೆ ಜನ ಸುಮ್ಮನೆ ಬಿಡಲ್ಲ ಎಂಬ ಸಿಎಂ ಹೇಳಿಕೆಗೆ  ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯ

ನನ್ನನ್ನ ಮುಟ್ಟಿದ್ರೆ ಜನ ಸುಮ್ಮನೆ ಬಿಡಲ್ಲ ಎಂಬ ಸಿಎಂ ಹೇಳಿಕೆಗೆ  ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯ

ಬೆಳಗಾವಿ,ನವೆಂಬರ್,14,2024 (www.justkannada.in): ನನ್ನನ್ನ ಮುಟ್ಟಿದ್ರೆ ಜನ ಸುಮ್ಮನೆ ಬಿಡಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯರನ್ನು ಯಾರಾದರೂ ಮುಟ್ಟೋಕೆ ಆಗುತ್ತಾ?  ಯಾರಾದರೂ ಸಿಎಂ ಮುಟ್ಟಿದ್ರೆ ಪೊಲೀಸರು ಕೇಸ್ ಹಾಕ್ತಾರೆ.  ಸಿದ್ದು ಆ ಅರ್ಥದಲ್ಲಿ ಮಾತನಾಡಿರಬಹುದು. ಅವರು ಏನು ಮಾತನಾಡುತ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ ಜನರ ಭಾವನೆಗೆ ತದ್ವಿರುದ್ದವಾಗಿ ಮಾತಾಡೋದು ಎಷ್ಟು ಸಮಂಜಸ ? ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅನುಭವಿ ರಾಜಕಾರಣಿ  ನಿಮ್ಮನ್ನು ಯಾರೂ ಮುಟ್ಟೋದು ಬೇಡ . ಸರ್ಕಾರದ ಕಾರ್ಯವೈಖರಿ ಬಗ್ಗೆ ಗಮನಹರಿಸಬೇಕು. ಅವರು ಏನು ಮಾತನಾಡುತ್ತಾರೆ ಎನ್ನುವುದು ಅವರಿಗೆ ಬಿಡುತ್ತೇನೆ ಎಂದು ವಿ.ಸೋಮಣ್ಣ ತಿಳಿಸಿದರು.

Key words: Union Minister, V. Somanna, CM Siddaramaiah, statement