Thursday, September 10, 2026

BDA Apartments

Home Front Page ಬಿಜೆಪಿಯಿಂದ ತೊಲಗಿರುವ ಪುಣ್ಯಾತ್ಮ ಕಾಂಗ್ರೆಸ್ ನಲ್ಲೇ ಇರಲಿ- ಬಿವೈ ವಿಜಯೇಂದ್ರ ವಾಗ್ದಾಳಿ

ಬಿಜೆಪಿಯಿಂದ ತೊಲಗಿರುವ ಪುಣ್ಯಾತ್ಮ ಕಾಂಗ್ರೆಸ್ ನಲ್ಲೇ ಇರಲಿ- ಬಿವೈ ವಿಜಯೇಂದ್ರ ವಾಗ್ದಾಳಿ

ರಾಮನಗರ, ನವೆಂಬರ್,5,2024 (www.justkannada.in): ಅಧಿಕಾರದ ದಾಹದಿಂದಾಗಿ ಸಿಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಹೋಗಿದ್ದಾರೆ. ಬಿಜೆಪಿಯಿಂದ ತೊಲಗಿರುವ ಪುಣ್ಯಾತ್ಮ ಕಾಂಗ್ರೆಸ್ ನಲ್ಲೇ ಇರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ವಾಗ್ದಾಳಿ ನಡೆಸಿದರು.

ಇಂದು ರಾಮನಗರ ಜಿಲ್ಲೆ ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿ ಮಾತನಾಡಿದ ಬಿವೈ ವಿಜಯೇಂದ್ರ, ಡಿಸಿಎಂ ಡಿಕೆ ಶಿವಕುಮಾರ್, ಉದ್ದುದ್ದ ಭಾಷಣ ಮಾಡಿದ್ದರು. ಆದರೆ ಒಂದುವರೆ ವರ್ಷದಿಂದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ ಉಪ ಚುನಾವಣೆ ಘೋಷಣೆಯಾದ್ದ ಬೆನ್ನಲ್ಲೆ ಕ್ಷೇತ್ರದ ಮೇಲೆ ಅವರಿಗೆ ಪ್ರೀತಿ ಹೆಚ್ಚಾಗಿದೆ ಎಂದು ಲೇವಡಿ ಮಾಡಿದರು. ಹಾಗೆಯೇ ನಿಖಿಲ್ ರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾಳೆ  ಲೋಕಾಯುಕ್ತ ಮುಂದೆ ಸಿಎಂ ಸಿದ್ದರಾಮಯ್ಯ ಹೋಗುತ್ತಾರೋ? ಇಲ್ಲ ಸಾಮಾನ್ಯರಂತೆ ಹೋಗುತ್ತಾರೆಯೋ ಎಂದು ಜನ ಕೇಳುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಟಾಂಗ್ ಕೊಟ್ಟರು.

Key words: Channapatna, By-Election, congress, BJP, BY Vijayendra