Sunday, September 20, 2026

BDA Apartments

ನಟ ದರ್ಶನ್ ಗೆ ಜೈಲಾ..? ಬೇಲಾ..? ಇಂದು ನಿರ್ಧಾರ BDA JK_Adv BDA Adv
Home Cinema ನಟ ದರ್ಶನ್ ಗೆ ಜೈಲಾ..? ಬೇಲಾ..? ಇಂದು ನಿರ್ಧಾರ

ನಟ ದರ್ಶನ್ ಗೆ ಜೈಲಾ..? ಬೇಲಾ..? ಇಂದು ನಿರ್ಧಾರ

ಬೆಂಗಳೂರು, ಅಕ್ಟೋಬರ್,30,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್  ಮಧ್ಯಂತರ ಜಾಮೀನು ಬಗ್ಗೆ ಇಂದು  ಆದೇಶ ಪ್ರಕಟವಾಗಲಿದೆ.

ಜಾಮೀನು ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ವಾದ ಪ್ರತಿವಾದ ಆಲಿಸಿ ಜಾಮೀನು ಆದೇಶ ಕುರಿತು ಇಂದಿಗೆ  ತೀರ್ಪು ಕಾಯ್ದಿರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಆದೇಶ ಪ್ರಕಟವಾಗಲಿದೆ.

ನಟ ದರ್ಶನ್ ಗೆ ಬೆನ್ನುನೋವು ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಸಿಗುವ ನಿರೀಕ್ಷೆಯಲ್ಲಿ ಕುಟುಂಬಸ್ಥರು, ಸ್ನೇಹಿತರು ಇದ್ದಾರೆ.

Key words: Actor, Darshan,  Interim Bail, Order, Today