Saturday, October 10, 2026

BDA Apartments

Home Front Page ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತರಿಂದ ಲೇಖನ ಆಹ್ವಾನಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ.

ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತರಿಂದ ಲೇಖನ ಆಹ್ವಾನಿಸಿದ ಕರ್ನಾಟಕ ಮಾಧ್ಯಮ ಅಕಾಡೆಮಿ.

Karnataka Media Academy invites articles from journalists for endowment award

ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತರಿಂದ ಲೇಖನ ಆಹ್ವಾನಿಸಿದ ಕರ್ನಾಟಕ ಮಾಧ್ಯ...

ಬೆಂಗಳೂರು, ಅ.29,2024: (www.justkannada.in news) ಕರ್ನಾಟಕ ಮಾಧ್ಯಮ ಅಕಾಡೆಮಿಯು 2023 ಮತ್ತು 24 ನೇ  ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ.

ಬೆಂಗಳೂರಿನ “ಅಭಿಮಾನಿ ಪ್ರಕಾಶನ” ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ “ಸಾಮಾಜಿಕ ಸಮಸ್ಯೆ”ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ  “ ಅಭಿಮಾನಿ ಪ್ರಶಸ್ತಿ” ಮೈಸೂರಿನ “ಮೈಸೂರು ದಿಗಂತ” ಪತ್ರಿಕಾ ಸಂಸ್ಥೆಯು “ಮಾನವೀಯ ಸಮಸ್ಯೆ” ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ  “ಮೈಸೂರು ದಿಗಂತ ಪ್ರಶಸ್ತಿ“,  ಬೆಂಗಳೂರಿನ ಅಭಿಮನ್ಯು  ಪತ್ರಿಕಾ ಸಂಸ್ಥೆಯು “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ  ಅಭಿಮನ್ಯು ಪ್ರಶಸ್ತಿ ,  ಬೆಂಗಳೂರಿನ  “ಪ್ರಜಾ ಸಂದೇಶ” ಪತ್ರಿಕಾ ಸಂಸ್ಥೆಯು  ಶೋಷಣೆಯನ್ನು ಪರಿಣಾಮ ಕಾರಿಯಾಗಿ  ಬಿಂಬಿಸುವ ಲೇಖನಕ್ಕೆ ” ಪ್ರಜಾ ಸಂದೇಶ  ದತ್ತಿ ಪ್ರಶಸ್ತಿ “  ಈ ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಸಂಸ್ಥೆಗಳು ದತ್ತಿಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸ್ಥಾಪಿಸಿವೆ.

ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತರಿಂದ ಲೇಖನ ಆಹ್ವಾನಿಸಿದ ಕರ್ನಾಟಕ ಮಾಧ್ಯ...

2023 ನೇ ಸಾಲಿನ ಪ್ರಶಸ್ತಿಗಳು:

2023 ಜನವರಿ ಯಿಂದ ಡಿಸೆಂಬರ್-2023 ರವರೆಗೆ, ಪ್ರಕಟವಾಗಿರುವ “ಸಾಮಾಜಿಕ ಸಮಸ್ಯೆ” ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಅಭಿಮಾನಿ ಪ್ರಶಸ್ತಿ-2023”, “ಮಾನವೀಯ ಸಮಸ್ಯೆ”ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ-2023” ಶೋಷಣೆಯನ್ನು ಪರಿಣಾಮ ಕಾರಿಯಾಗಿ  ಬಿಂಬಿಸುವ ಲೇಖನಕ್ಕೆ “ ಪ್ರಜಾ ಸಂದೇಶ ಪ್ರಶಸ್ತಿ-2023” ಹಾಗೂ  “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿ ವರದಿಗೆ “ಅಭಿಮನ್ಯು ದತ್ತಿ ಪ್ರಶಸ್ತಿ -2023” ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.

justkannada TOP-BANNER-01 TOP BANNER 01

2024 ನೇ ಸಾಲಿನ ಪ್ರಶಸ್ತಿಗಳು :

2024 ಜನವರಿ ಯಿಂದ ಸೆಪ್ಟೆಂಬರ್ 2024 ರವರೆಗೆ  ಪ್ರಕಟವಾಗಿರುವ “ಸಾಮಾಜಿಕ ಸಮಸ್ಯೆ” ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಅಭಿಮಾನಿ ಪ್ರಶಸ್ತಿ-2024”, “ಮಾನವೀಯ ಸಮಸ್ಯೆ”ಗಳನ್ನು ಪ್ರತಿಬಿಂಬಿಸುವ ಲೇಖನ ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ-2024” ಶೋಷಣೆಯನ್ನು ಪರಿಣಾಮ ಕಾರಿಯಾಗಿ  ಬಿಂಬಿಸುವ ಲೇಖನಕ್ಕೆ “ ಪ್ರಜಾ ಸಂದೇಶ ಪ್ರಶಸ್ತಿ-2024  ಹಾಗೂ “ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ ಅಂಕಣ/ ಸಂಪಾದಕೀಯ/ ಪರಿಣಾಮಕಾರಿಯಾದ ವರದಿಗೆ “ಅಭಿಮನ್ಯು ಪ್ರಶಸ್ತಿ -2024 ಎಂದು ದಾಖಲಿಸಿ ಪ್ರತ್ಯೇಕವಾಗಿ ಕಳುಹಿಸಬೇಕು.

2024 www justkannada LADYS

ಕನ್ನಡ ದೈನಿಕ–ಟಿವಿ-ವಾಹಿನಿ, ವಾರ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪರ್ತಕರ್ತರು ಹೆಸರು (ಬೈಲೈನ್)  ಬರೆದಿರುವ ವರದಿ ಲೇಖನಗಳಿಗೆ ಮಾತ್ರ ಪ್ರಶಸ್ತಿಗೆ ಅವಕಾಶ, ಲೇಖನ ವರದಿಗಳಲ್ಲಿ ಹೆಸರು (ಬೈಲೈನ್) ಪ್ರಕಟವಾಗದಿದ್ದಲ್ಲಿ ಸಂಬಧಿಸಿದ ಪತ್ರಿಕೆಯ ಸಂಪಾದಕ ರಿಂದ ದೃಢೀಕರಣ ಪತ್ರವನ್ನು ಪಡೆದು ಕಳುಹಿಸಬೇಕು.

ಲೇಖನ-ವರದಿಗಳನ್ನು ಇದೇ  ದಿನಾಂಕ : 20/11/2024ರ ಒಳಗಾಗಿ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ “ಅಭಿಮಾನಿ ಪ್ರಶಸ್ತಿ-2023”, “ಅಭಿಮಾನಿ ಪ್ರಶಸ್ತಿ-2024” ಹಾಗೂ “ಮೈಸೂರು ದಿಗಂತ ಪ್ರಶಸ್ತಿ-2023” “ಮೈಸೂರು ದಿಗಂತ ಪ್ರಶಸ್ತಿ-2024” “ಪ್ರಜಾ ಸಂದೇಶ ಪ್ರಶಸ್ತಿ-2023”, “ಪ್ರಜಾ ಸಂದೇಶ ಪ್ರಶಸ್ತಿ-2024” ಹಾಗೂ “ಅಭಿಮನ್ಯು ಪ್ರಶಸ್ತಿ -2023”, “ಅಭಿಮನ್ಯು ಪ್ರಶಸ್ತಿ-2024” ಎಂದು ಸ್ಪಷ್ಟವಾಗಿ ಬರೆದು ಲೇಖನಗಳನ್ನು ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560001. ಇವರಿಗೆ ಕಳುಹಿಸಲು ಅಥವಾ  kmaprashast@gmail.com ಗೆ ಇ – ಮೇಲ್  ಮೂಲಕ ಕಳುಹಿಸಲು ಅಕಾಡೆಮಿಯ ಅಧ್ಯಕ್ಷರಾದ ಆಯೇಶಾ ಖಾನಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words: Karnataka Media Academy, invites articles, journalists, endowment award