Monday, September 14, 2026

BDA Apartments

ಇಡಿ ದಾಳಿ ಅಂತ್ಯ: ಮಾಜಿ ಮುಡಾ ಆಯುಕ್ತ ನಟೇಶ್ ರನ್ನು ವಶಕ್ಕೆ ಪಡೆದು ಕರೆದೊಯ್ದ ...
Home Crime ಇಡಿ ದಾಳಿ ಅಂತ್ಯ: ಮಾಜಿ ಮುಡಾ ಆಯುಕ್ತ ನಟೇಶ್ ರನ್ನು ವಶಕ್ಕೆ ಪಡೆದು ಕರೆದೊಯ್ದ ಅಧಿಕಾರಿಗಳು

ಇಡಿ ದಾಳಿ ಅಂತ್ಯ: ಮಾಜಿ ಮುಡಾ ಆಯುಕ್ತ ನಟೇಶ್ ರನ್ನು ವಶಕ್ಕೆ ಪಡೆದು ಕರೆದೊಯ್ದ ಅಧಿಕಾರಿಗಳು

ಬೆಂಗಳೂರು,ಅಕ್ಟೋಬರ್,29,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ನಟೇಶ್ ಮನೆ ಮೇಲಿನ ಇಡಿ ದಾಳಿ ಅಂತ್ಯವಾಗಿದ್ದು ಈ ಮಧ್ಯೆ ನಟೇಶ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಡಾ ಸೈಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಲ್ಲೇಶ್ವರಂ 10ನೇ ಕ್ರಾಸ್ ನಲ್ಲಿರುವ ಮಾಜಿ ಮುಡಾ ಆಯುಕ್ತ ನಟೇಶ್ ಮನೆ ಮೇಲೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದರು.  ಸತತ 33 ಗಂಟೆಗಳ ದಾಳಿ ನಡೆಸಿ ಪರಿಶೀಲನೆ ನಡೆಸಿದ ಇಡಿ ಅಧಿಕಾರಿಗಳು ಇದೀಗ  ಎರಡು ಬ್ಯಾಗ್ ನಲ್ಲಿ ದಾಖಲೆಗಳನ್ನ ಕೊಂಡೊಯ್ದಿದ್ದಾರೆ.ಇಡಿ ದಾಳಿ ಅಂತ್ಯ natesh

ನಟೇಶ್ ರನ್ನು ವಶಕ್ಕೆ ಪಡೆದ ಇಡಿ ಅಧಿಕಾರಿಗಳು

ಈ ನಡುವೆ ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಟೇಶ್ ರನ್ನ ವಶಕ್ಕೆ ಪಡೆದ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಶಾಂತಿನಗರದ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

Key words: ED, raid, End, Former Muda commissioner, Natesh