Monday, August 17, 2026

BDA Apartments

Home Front Page ಮುಡಾ ಹಗರಣ; ಆರ್ ಟಿಐ ಕಾರ್ಯಕರ್ತ ಗಂಗರಾಜು ವಿಚಾರಣೆ ಅಂತ್ಯ

ಮುಡಾ ಹಗರಣ; ಆರ್ ಟಿಐ ಕಾರ್ಯಕರ್ತ ಗಂಗರಾಜು ವಿಚಾರಣೆ ಅಂತ್ಯ

ಬೆಂಗಳೂರು,ಅಕ್ಟೋಬರ್,28,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಆರ್ ಟಿಐ ಕಾರ್ಯಕರ್ತ ಇಂದು ಇಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದು ವಿಚಾರಣೆ ಮುಗಿಸಿ ವಾಪಸ್ ಬಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಲಾಗಿದೆ ತನಿಖೆ ನಡೆಸುವಂತೆ ಆರ್ ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಖಲೆ ಒದಗಿಸುವಂತೆ ಇಡಿ ಅಧಿಕಾರಿಗಳು ಗಂಗರಾಜು ಅವರಿಗೆ ನೋಟಿಸ್ ನೀಡಿದ್ದರು.

ಈ ಹಿನ್ನೆಲೆ ಇಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಹಾಜರಾದ ಗಂಗರಾಜು ಅವರು ದಾಖಲೆಗಳನ್ನ ಸಲ್ಲಿಸಿದ್ದಾರೆ ಎನ್ನಲಾಗಿದೆ. ಗಂಗರಾಜು ವಿಚಾರಣೆ ಮುಗಿಸಿ ಹೊರಬಂದಿದ್ದಾರೆ.

Key words: Muda Scam,  RTI activist, Gangaraju, ED