Saturday, August 8, 2026

BDA Apartments

Home Front Page ಶಾಸಕ ಸತೀಶ್ ಸೈಲ್ ಗೆ ಜೈಲು ಶಿಕ್ಷೆ: ಕೋರ್ಟ್ ಆದೇಶ ಕೇಳಿ ಶಾಕ್ ಆಯ್ತು ಎಂದ...

ಶಾಸಕ ಸತೀಶ್ ಸೈಲ್ ಗೆ ಜೈಲು ಶಿಕ್ಷೆ: ಕೋರ್ಟ್ ಆದೇಶ ಕೇಳಿ ಶಾಕ್ ಆಯ್ತು ಎಂದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಅಕ್ಟೋಬರ್,26,2024 (www.justkannada.in):  ಬೇಲೆಕೇರಿ ಅದಿರು ಅಕ್ರ ಸಾಗಾಟ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟವಾಗಿರುವ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಯ್ತು ಎಂದಿದ್ದಾರೆ.

ಈ ಕುರಿತು ಮಾತನಾಡಿದ  ಡಿಸಿಎಂ ಡಿಕೆ ಶಿವಕುಮಾರ್, ಕಾನೂನಿಗೆ ಯಾರೇ ಆಗಲಿ ಗೌರವ ಕೊಡಬೇಕು. ಶಾಸಕ ಸತೀಶ್ ಸೈಲ್​​ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅವರು ಮೇಲ್ಮನವಿ ಸಲ್ಲಿಸಬಹುದು. ಶಾಸಕ ಸತೀಶ್ ಸೈಲ್ ಕಾನೂನು ತಜ್ಞರ ಜೊತೆ ಮಾತನಾಡುತ್ತಾರೆ ಎಂದರು.

ಇನ್ನು ಸತೀಶ್ ಸೈಲ್ ಶಾಸಕ ಸ್ಥಾನದಿಂದ ಅನರ್ಹ ಆಗುವ ಕುರಿತು ನನಗೆ ತಿಳಿದಿಲ್ಲ. ಮುಂದೆ ಏನು ಆಗುತ್ತದೆ ನೋಡೋಣ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Jail, MLA, Satish Sail, DCM DK Shivakumar, shocked