Saturday, August 8, 2026

BDA Apartments

Home Front Page ಕಾಂಗ್ರೆಸ್ ಸಂಪರ್ಕದಲ್ಲಿ ಸಿಪಿವೈ  ಎಂಬ ಹೆಚ್ ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಕಾಂಗ್ರೆಸ್ ಸಂಪರ್ಕದಲ್ಲಿ ಸಿಪಿವೈ  ಎಂಬ ಹೆಚ್ ಡಿಕೆ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು,ಅಕ್ಟೋಬರ್,21,2024 (www.justkannada.in):  ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,   ಹೆಚ್.ಡಿ ಕುಮಾರಸ್ವಾಮಿ ರಾಜಕಾರಣ ಅವರಿಗೆ ಗೊತ್ತು. ವೈಯಕ್ತಿಕ ರಾಜಕಾರಣವೇ ಒಂದು,  ಪಾರ್ಟಿ ರಾಜಕಾರಣವೇ ಒಂದು.  ನಾನು ಸಿಪಿ ಯೋಗೇಶ್ವರ್  ಬೇಟಿಯಾಗಿಲ್ಲ. ಅವರ ಜೊತೆ ಮಾತನಾಡಿಯೂ ಇಲ್ಲ. ಧ್ವಜಾರೋಹಣ ಸಂದರ್ಭದಲ್ಲಿ ಗೌರವ ಕೊಡಲಾಗಿದೆ. ಅಷ್ಟು ಬಿಟ್ಟರೇ ಬೇರೆನೂ ಇಲ್ಲ. ಚನ್ನಪಟ್ಟಣ ಕ್ಷೇತ್ರವನ್ನ ಬಿಜೆಪಿಗೆ ಬಿಟ್ಟುಕೊಟ್ಟರೇ ಜೆಡಿಎಸ್ ಗೆ ಅಸ್ತಿತ್ವವೇ ಇರುವುದಿಲ್ಲ ಎಂದು ಲೇವಡಿ ಮಾಡಿದರು.

ಹೆಚ್ ಡಿಕೆ ಇಷ್ಟು ವೀಕ್‍ ಆಗ್ತಾರೆ ಅಂದುಕೊಂಡಿರಲಿಲ್ಲ. ಸಾರ್ವಜನಕವಗಿ ಒಂದು ಮಾತು, ಆಂತರಿಕವಾಗಿ ಒಂದು ಮಾತು. ಹೆಚ್ ಡಿಕೆ ಅವರ ಮಾತಿಗೆ ಅವರೇ ಸ್ಟ್ಯಾಂಡ್  ಕೊಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಟೀಕಿಸಿದರು.

Key words: DCM, DK Shivakumar, HDK,   CP Yogeshwar, Congress