Thursday, October 15, 2026

Dasara Wishes

ಮತ್ತೊಂದು ಬಹುಕೋಟಿ ವಂಚನೆ ಬಯಲು: ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚಕರು ಪರಾರಿ...
Happy Dasara
Home Front Page ಮುಡಾ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ, ದುರುದ್ದೇಶಪೂರ್ವಕ- ಡಿಕೆ ಸುರೇಶ್ ಕಿಡಿ

ಮುಡಾ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ, ದುರುದ್ದೇಶಪೂರ್ವಕ- ಡಿಕೆ ಸುರೇಶ್ ಕಿಡಿ

ಬೆಂಗಳೂರು,ಅಕ್ಟೋಬರ್,18,2024 (www.justkananda.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಇಡಿ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ, ದುರುದ್ದೇಶಪೂರ್ವಕ ಎಂದು ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

ಇಂದು ಮೈಸೂರಿನ ಮುಡಾ ಕಚೇರಿ ಮೇಲೆ  ಇಡಿ ದಾಳಿ ಕುರಿತು ಮಾತನಾಡಿದ ಡಿ.ಕೆ ಸುರೇಶ್, ಇಡಿ ದಾಳಿ ದುರುದ್ದೇಶ ಪೂರ್ವಕ. ಇದೊಂದು ರಾಜಕೀಯ ಪ್ರೇರಿತ ದಾಳಿ. ಕೇಂದ್ರ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಐಟಿ ಸಿಬಿಐ ಕೇಂದ್ರ ಸರ್ಕಾರದ ರಾಜಕೀಯ ಅಸ್ತ್ರಗಳಾಗಿವೆ ಎಂದು ವಾಗ್ದಾಳಿ ನಡೆಸಿದರು

ರಾಜ್ಯ ಸರ್ಕಾರ  ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಆರೋಪಮುಕ್ತರಾಗುತ್ತಾರೆ ಎಂದು ಡಿಕೆ ಸುರೇಶ್ ತಿಳಿಸಿದರು.

Key words: ED, raid, Muda, politically motivated, DK Suresh