Saturday, August 22, 2026

BDA Apartments

Home Front Page ಮುಸ್ಲೀಮರ ಓಲೈಕೆಯಿಂದಲೇ ಕಾಂಗ್ರೆಸ್ ನಿರ್ನಾಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಮುಸ್ಲೀಮರ ಓಲೈಕೆಯಿಂದಲೇ ಕಾಂಗ್ರೆಸ್ ನಿರ್ನಾಮ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ,ಅಕ್ಟೋಬರ್,12,2024 (www.justkannada.in):  ಹಳೇ ಹುಬ್ಬಳ್ಳಿ ಕೇಸ್​ ಹಿಂಪಡೆದಿದ್ದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲಿಸುವ ಪಕ್ಷ. ರಾಜ್ಯ ಸರ್ಕಾರ ಮುಸ್ಲೀಂ ಓಲೈಕೆ ಮಾಡುತ್ತಿದೆ.  ಪೊಲೀಸ್ ಠಾಣೆಗೆ ಕಲ್ಲು ತೂರಿದ್ದವರು ಅಮಾಯಕರಾ?   ಲೋಕಸಭೆ ಚುನಾವಣೆಯಲ್ಲಿ 100 ಸ್ಥಾನ ಗೆಲ್ಲಲು ಆಗಲಿಲ್ಲ.  ಮುಸ್ಲೀಮರ ಓಲೈಕೆಯಿಂದಲೇ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ವೋಟ್​ಗಾಗಿ ಭಯೋತ್ಪಾದಕರಿಗೂ ಸಪೋರ್ಟ್​ ಮಾಡುತ್ತಾರೆ. ಅಧಿಕಾರ ಇದೆ ಅಂತಾ ಸಿದ್ದರಾಮಯ್ಯನವರು ಮಾತಾಡಿದ್ದಾರೆ. ಅಧಿಕಾರ ಜ‌ನ‌ ಕೊಟ್ಟಿದ್ದು, ಸಂಯಮ, ವಿವೇಚನೆಯಿಂದ ಬಳಸಬೇಕು ಎಂದು  ಪ್ರಹ್ಲಾದ್ ಜೋಶಿ ಹರಿಹಾಯ್ದರು.

Key words: Union Minister, Prahlad Joshi , Congress, favoring, Muslims