Friday, September 18, 2026

BDA Apartments

ಮೈಸೂರು ದಸರಾ: ಕ್ಯಾ.ಅಭಿಮನ್ಯುವಿಗೆ ಅಂಬಾರಿ ಕಟ್ಟುವ ಕಾರ್ಯ BDA JK_Adv BDA Adv
Home DASARA2024 ಮೈಸೂರು ದಸರಾ: ಕ್ಯಾ.ಅಭಿಮನ್ಯುವಿಗೆ  ಅಂಬಾರಿ ಕಟ್ಟುವ ಕಾರ್ಯ

ಮೈಸೂರು ದಸರಾ: ಕ್ಯಾ.ಅಭಿಮನ್ಯುವಿಗೆ  ಅಂಬಾರಿ ಕಟ್ಟುವ ಕಾರ್ಯ

ಮೈಸೂರು,ಅಕ್ಟೋಬರ್,12,2024 (www.justkannanda.in): ಕೆಲವೇ ಕ್ಷಣಗಳಲ್ಲಿ ವಿಶ್ವ ವಿಖ್ಯಾತ ಮೈಸೂರು ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದ್ದು ಕ್ಯಾಪ್ಟನ್ ಅಭಿಮನ್ಯುವಿಗೆ  ಅಂಬಾರಿ ಕಟ್ಟುವ ಕಾರ್ಯ ನಡೆಯುತ್ತಿದೆ.

750 ಕೆಜಿ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಸಜ್ಜಾಗಿದ್ದು ಈ ಬಾರಿ 9 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ.  ಅರಮನೆ, ಜಯಚಾಮರಾಜ ವೃತ್ತ,  ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಅಯುರ್ವೇದಿಕ್ ವೃತ್ತ, ತಿಲಕ್ ನಗರ, ಆರ್ ಎಂಸಿ ವೃತ್ತ, ಬಂಬೂ ಬಜಾರ್, ಹೈವೇ ರೋಡ್ ಮೂಲಕ ಜಂಬೂ ಸವಾರಿ ಮೆರವಣಿಗೆಯು ಬನ್ನಿ ಮಂಟಪ ತಲುಪಲಿದೆ.

ದಸರಾ ಗಜಪಡೆ ಆನೆಗಳಿಗೆ  ಸುಂದರವಾಗಿ ಅಲಂಕಾರ ಮಾಡಲಾಗಿದ್ದು, ವಿವಿಧ ರಾಜ್ಯಗಳ ಜನರು ದೇಶ ವಿದೇಶಿ ಪ್ರವಾಸಿಗರು ದಸರಾ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ.

Key words: mysore dasara, jambu savari, ambari