Friday, September 11, 2026

BDA Apartments

Home Front Page ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷರು ಹಾಗೂ ಅವರ ನಿಯೋಗಕ್ಕೆ ಸ್ವಾಗತ ಕೋರಿದ ಸಚಿವರು

ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷರು ಹಾಗೂ ಅವರ ನಿಯೋಗಕ್ಕೆ ಸ್ವಾಗತ ಕೋರಿದ ಸಚಿವರು

ಬೆಂಗಳೂರು, ಅಕ್ಟೋಬರ್, 9, 2024(www.justkannada.in): ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜ್ಜು ಮತ್ತು ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ ಹಾಗೂ ಅವರ ನಿಯೋಗ ಬೆಂಗಳೂರಿನ ಭೇಟಿಗಾಗಿ ಬುಧವಾರದಂದು ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಮಾಲ್ಡೀವ್ಸ್ ಗಣರಾಜ್ಯದ  ಅಧ್ಯಕ್ಷರನ್ನು ಉನ್ನತ ಶಿಕ್ಷಣ ಇಲಾಖೆಯ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಂಡಿಯಾ ಮಾಲ್ಡೀವ್ಸ್ ಹೈ ಕಮಿಷನರ್ ಮುನು ಮಹವರ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಸತ್ಯವತಿ ಜಿ., ಬೆಂಗಳೂರು ನಗರ ಪೋಲೀಸ್ ಆಯುಕ್ತ  ಬಿ.ದಯಾನಂದ,  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಸೇರಿದಂತೆ ಗಣ್ಯರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister, welcome , Maldives, President ,Bangalore