Friday, September 11, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ನಂತರ ಮತ್ತೊಬ್ಬ ಭವಿಷ್ಯದ ನಾಯಕ ಸತೀಶ್ ಜಾರಕಿಹೊಳಿ  ಎಂದ ‘ಕೈ’ ಶಾಸಕ

ಸಿಎಂ ಸಿದ್ದರಾಮಯ್ಯ ನಂತರ ಮತ್ತೊಬ್ಬ ಭವಿಷ್ಯದ ನಾಯಕ ಸತೀಶ್ ಜಾರಕಿಹೊಳಿ  ಎಂದ ‘ಕೈ’ ಶಾಸಕ

ಚಿಕ್ಕಮಗಳೂರು, ಅಕ್ಟೋಬರ್,9,2024 (www.justkannada.in):   ಸಿಎಂ ಸಿದ್ದರಾಮಯ್ಯ ಬಳಿಕ  ಮತ್ತೊಬ್ಬ ಭವಿಷ್ಯದ ನಾಯಕ ಅಂದರೆ ಅದು ಸತೀಶ್ ಜಾರಕಿಹೊಳಿ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ ತಮ್ಮಯ್ಯ  ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ, ಸಿಎಂ ಸಿದ್ದರಾಮಯ್ಯ ಈ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ನಂತರ ಮತ್ತೊಬ್ಬ ನಾಯಕ ಇದ್ದರೆ ಅದು ಸತೀಶ್ ಜಾರಕಿಹೊಳಿ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಸತೀಶ್ ಜಾರಕಿಹೊಳಿಯವರೇ ಭವಿಷ್ಯದ ನಾಯಕರು ಎಂದರು.

ಸಚಿವ ಸತೀಶ್ ಜಾರಕಿಹೊಳಿ ಅವರು ಸರಳ ಸಜ್ಜನ ರಾಜಕಾರಣಿ.  ಒಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನೆಲೆಯಲ್ಲಿದೆ. ಈ ಮಧ್ಯೆ ತೆರೆಮರೆಯಲ್ಲಿ ಖರ್ಗೆ-ಪರಮೇಶ್ವರ್ ಕಸರತ್ತಿನ ವದಂತಿಗಳು ಜೋರಾಗಿದೆ ಎಂದು ಹೆಚ್.ಡಿ ತಮ್ಮಯ್ಯ ಹೇಳಿದರು.

Key words:  future leader, after, CM Siddaramaiah, Satish Jarakiholi