Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Crime ಮುನಿರತ್ನರಿಂದ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್: ಸಂತ್ರಸ್ತ ಮಹಿಳೆ ಸ್ಪೋಟಕ ಆರೋಪ

ಮುನಿರತ್ನರಿಂದ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್: ಸಂತ್ರಸ್ತ ಮಹಿಳೆ ಸ್ಪೋಟಕ ಆರೋಪ

ಬೆಂಗಳೂರು,ಅಕ್ಟೋಬರ್,9,2024 (www.justkannada.in):  ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ದ ಸಂತ್ರಸ್ತ ಮಹಿಳೆ ಮತ್ತೊಂದು ಸ್ಪೋಟಕ ಆರೋಪ ಮಾಡಿದ್ದಾರೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಂತ್ರಸ್ತ ಮಹಿಳೆ,  ಮುನಿರತ್ನ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್ ಮಾಡಿಸಿದ್ದಾರೆ.  ಮುನಿರತ್ನ ಬಳಿ ಮಾಜಿ ಸಿಎಂಗಳ ವಿಡಿಯೋ ಇದೆ. ವಿಡಿಯೋ ತೋರಿಸಿಯೇ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು.  ಹನಿಟ್ರ್ಯಾಪ್ ಮಾಡಿದ್ದಕ್ಕೆ ಸಾಕ್ಷಿ ಇದೆ. ಹಲವು ಮಹಿಳೆಯರನ್ನ ಬಳಸಿಕೊಂಡು  ಟ್ರ್ಯಾಪ್ ಮಾಡಲಾಗಿದೆ. ಮುನಿರತ್ನ ಹೆಸರು ಹೇಳಲು ಮಹಿಳೆಯರಿಗೆ ಭಯ. ಮಾಜಿ ಸಿಎಂಗೆ ಟಾರ್ಚರ್ ಕೊಟ್ಟದ್ದಕ್ಕೆ ಸಾಕ್ಷಿ ಇದೆ.  ಮುನಿರತ್ನ ಬಳಿ ತಂತ್ರಜ್ಞಾನ ಮೊಬೈಕ್ ಗಳಿವೆ. ಕೃತ್ಯ ಸಹಿಸಲಾರದೆ ದೂರು ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

2020ರಲ್ಲಿ ಮುನಿರತ್ನ ನನಗೆ ಪರಿಚಯವಾದರು. ಮಮತಾ ವೆಂಕಟೇಶ್ ಮೂಲಕ ಪರಿಚಯವಾದರು. ಮುನಿರತ್ನ ನನಗೆ ವಿಡಿಯೋ ಕರೆ ಮಾಡಿದ್ದಾರೆ. ಒಂದು ದಿನ ಗೋದಾಮಿಗೆ ಕರೆದುಕೊಂಡು ಹೋದರು ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದರು. ಜಾಮೀನು ಪಡೆದು ಬಂದ ಮೇಲೆ ನನಗೆ ಜೀವಭಯವಿದೆ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.

Key words: Honeytrap, Muniratna, former CM, allegations