Wednesday, September 30, 2026

BDA Apartments

ಮೈಸೂರು ದಸರಾ2024: ನಾಳೆ(ಸೆ .26) ಚಲನಚಿತ್ರೋತ್ಸವದ ಪಾಸ್ ವಿತರಣೆ BDA JK_Adv BDA Adv
Home DASARA2024 ಮೈಸೂರು ದಸರಾ2024: ನಾಳೆ(ಸೆ .26) ಚಲನಚಿತ್ರೋತ್ಸವದ ಪಾಸ್ ವಿತರಣೆ

ಮೈಸೂರು ದಸರಾ2024: ನಾಳೆ(ಸೆ .26) ಚಲನಚಿತ್ರೋತ್ಸವದ ಪಾಸ್ ವಿತರಣೆ

ಮೈಸೂರು,ಸೆಪ್ಟಂಬರ್,25,2024 (www.justkannada.in): ಮೈಸೂರು ದಸರಾ ಮಹೋತ್ಸವ 2024 ಸೇರಿದಂತೆ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಅಕ್ಟೋಬರ್ 04 ರಿಂದ 10 ರವರೆಗೆ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಹಾಗೂ ಡಿ ಆರ್ ಸಿ ಪರದೆಗಳಲ್ಲಿ ಚಲನಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಈ ಸಂಬಂಧ ಸೆಪ್ಟೆಂಬರ್ 26 ರಂದು (ಗುರುವಾರ) ಬೆಳಿಗ್ಗೆ 10.30 ರಿಂದ ಸಂಜೆ 4.30 ರವರೆಗೆ ನಗರದ ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಿನಿಮಾ ಪ್ರಿಯರಿಗೆ ಚಲನ ಚಿತ್ರೋತ್ಸವ ಪ್ರದರ್ಶನದ ಪಾಸ್ ವಿತರಣೆ ಮಾಡಲಾಗುತ್ತದೆ.

ಚಲನಚಿತ್ರೋತ್ಸವ ಪಾಸ್ ದರ ಸಾಮಾನ್ಯರಿಗೆ 500 ರೂ.ಗಳಾಗಿದ್ದರೆ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ  300 ರೂ.ಗಳಾಗಿರುತ್ತವೆ. ಈ ಪಾಸ್ ಏಳು ದಿನಗಳವರೆಗೂ ಚಾಲ್ತಿಯಲ್ಲಿರುತ್ತದೆ.

ಪಾಸ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಶ್ರೇಯಸ್, ಮೊ.ಸಂ: 7892543852 ಅನ್ನು ಸಂಪರ್ಕಿಸಬಹುದು ಎಂದು ಚಲನಚಿತ್ರೋತ್ಸವ ಉಪಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.

ಮೈಸೂರು ದಸರಾ2024 VTU TOP BANNER 04

Key words: Mysore Dasara 2024, Distribution, film festival, passes