Wednesday, September 30, 2026

BDA Apartments

ದುಬಾರಿ “YUVA DASARA” : ಗೋಲ್ಡ್ ಕಾರ್ಡ್ ಗಿಂತ ಕಾಸ್ಟ್ಲೀ..! BDA JK_Adv BDA Adv
Home DASARA2024 ದುಬಾರಿ “YUVA DASARA” : ಗೋಲ್ಡ್ ಕಾರ್ಡ್ ಗಿಂತ ಕಾಸ್ಟ್ಲೀ..!

ದುಬಾರಿ “YUVA DASARA” : ಗೋಲ್ಡ್ ಕಾರ್ಡ್ ಗಿಂತ ಕಾಸ್ಟ್ಲೀ..!

 

ಮೈಸೂರು,ಸೆಪ್ಟಂಬರ್,25,2024 (www.justkannada.in):  ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2024 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು,  ನಾಡಹಬ್ಬ ದಸರಾ ಅಂಗವಾಗಿ ನಡೆಯುವ ಯುವದಸರಾಗೆ ಟಿಕೆಟ್ ದರ ನಿಗದಿಪಡಿಸಲಾಗಿದ್ದು ಗೋಲ್ಡ್ ಕಾರ್ಡ್ ಗಿಂತಲೂ ಈ ದರ ದುಬಾರಿಯಾಗಿದೆ.

06.10.2024 ರಿಂದ 10.10.2024 ರ ವರೆಗೆ ಐದು ದಿನಗಳ ಕಾಲ ಯುವ ದಸರಾ-2024 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದುಅಕ್ಟೋಬರ್ 6 ರಂದು  ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಯುವ ದಸರಾ-2024 ರ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತವಾಗಿ ಅವಕಾಶ ಕಲ್ಪಿಸಲಾಗಿದೆ.  ಸುಮಾರು ಒಂದು ಲಕ್ಷ ಜನರು ಯುವ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ ಕಾರ್ಯಕ್ರಮಗಳ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟಿಕೆಟ್ ಆಧಾರಿತ ಆಸನ ವ್ಯವಸ್ಥೆ ಕೂಡ ಕೈಗೊಂಡಿದ್ದು ಆಸನ ಕಾಯ್ದಿರಿಸಲು ಆನ್‌ಲೈನ್ ಮುಖಾಂತರ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗಿದೆ.

ಯುವ ದಸರಾ ಟಿಕೆಟ್ ಗಳು ಮೈಸೂರು ದಸರಾ-2024 ರ ಅಧಿಕೃತ ಜಾಲತಾಣ (website) https://www.mysoredasara.gov.in/ BOOK MY SHOW ಮೂಲಕ ದಿನಾಂಕ: 27.09.2024 ರಿಂದ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಗೋಲ್ಡ್ ಕಾರ್ಡ್ ಗಿಂತಲೂ ದುಬಾರಿ ಯುವ ದಸರಾ ಟಿಕೆಟ್

ಕಾರ್ಯಕ್ರಮ ವೀಕ್ಷಣೆಗೆ ಕಾಯ್ದಿರಿಸಲಾಗುವ ವೀಕ್ಷಕರ ಗ್ಯಾಲರಿ-1 (ವೇದಿಕೆ ಸಮೀಪ) ರ ಟಿಕೆಟ್ ಗಳ ಮುಖ ಬೆಲೆ ರೂ.8000/-, ವೀಕ್ಷಕರ ಗ್ಯಾಲರಿ-2 ರ ಟಿಕೆಟ್ ರೂ.5000/-, ಗಳಾಗಿವೆ.  ಒಂದೇ ದಿನಕ್ಕೆ ಈ ಟಿಕೆಟ್ ಗಳು ಸೀಮಿತವಾಗಿದೆ. ಗೋಲ್ಡ್ ಕಾರ್ಡ್ 6500 ರೂ. ಇದ್ದು ಈ ದರಕ್ಕಿಂತಲೂ ಯುವದಸರಾ ಟಿಕೆಟ್ ದರ ಹೆಚ್ಚಾಗಿದೆ. ಈ ಹಿಂದೆ ದಸರಾದಲ್ಲಿ ಒಮ್ಮೆ ಗೋಲ್ಡ್ ಕಾರ್ಡ್ ಖರೀದಿಸಿದರೇ  ಯುವ ದಸರಾ ಸೇರಿ ದಸರಾದ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಬಹುದಿತ್ತು. ಆದರೆ ಈ ಬಾರಿ ಗೋಲ್ಡ್ ಕಾರ್ಡ್ ಅನ್ನು ಜಂಬೂ ಸವಾರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಯುವದಸರಾ ನೋಡಲು ಹೋಗುವವರು ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳಬೇಕಾಗಿದ್ದು, ಗೋಲ್ಡ್ ಕಾರ್ಡ್ ಗೂ ಯುವದಸರಾಗೂ ಯಾವುದೇ ಸಂಬಂಧವಿಲ್ಲ. ಪ್ರತ್ಯೇಕ ಟಿಕೆಟ್ ಖರೀದಿಸಬೇಕಾಗಿದೆ.

ದುಬಾರಿ "YUVA DASARA" VTU TOP BANNER 04

Key words: mysore dasara, Expensive, YUVA DASARA, ticket