Sunday, August 16, 2026

BDA Apartments

Home Front Page ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವೇನು ಇಲ್ಲ: ಇದೊಂದು ಪಿತೂರಿ- ಸಚಿವ ಶರಣ ಪ್ರಕಾಶ್ ಪಾಟೀಲ್

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರವೇನು ಇಲ್ಲ: ಇದೊಂದು ಪಿತೂರಿ- ಸಚಿವ ಶರಣ ಪ್ರಕಾಶ್ ಪಾಟೀಲ್

ಕಲ್ಬುರ್ಗಿ, ಸೆಪ್ಟಂಬರ್,24,2024 (www.justkannada.in):  ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೇನು ಇಲ್ಲ. ಇದೊಂದು ಪಿತೂರಿ ಅಷ್ಟೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಇಂದು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿ ಕುರಿತು ತೀರ್ಪು ಇಂದು ಹೈಕೋರ್ಟ್ ನಲ್ಲಿ ಹೊರ ಬೀಳಲಿದೆ. ಈ ಕುರಿತು ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿದ್ದರಾಮಯ್ಯ ಕೋರ್ಟ್ ಮೊರೆ ಹೋಗಿದ್ದಾರೆ. ಇಂದು ತೀರ್ಪು ಇದೆ ಕಾದು ನೋಡೋಣ ಎಂದರು.

ತೀರ್ಪು ಬಂದ ಮೇಲೆ ಏನು ಮಾಡಬೇಕು ಅಂತಾ ನಿರ್ಧಾರ  ಮಾಡಲಾಗುತ್ತದೆ. ಊಹಪೋಹಗಳಿಗೆ ಪ್ರತಿಕ್ರಿಯೆ ನೀಡಲ್ಲ. ಮುಡಾ ಹಗರಣದಲ್ಲಿ  ಸಿದ್ದರಾಮಯ್ಯ ಪಾತ್ರ ಏನು ಇಲ್ಲ.  ಸೈಟ್ ಹಂಚಿದಾಗ ಕಾಂಗ್ರೆಸ್ ಸರ್ಕಾರ ಇರಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

Key words: No role, Siddaramaiah, Muda scam, Minister,  Sharan Prakash Patil