Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Crime ಮೈಸೂರಿನಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು

ಮೈಸೂರಿನಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು

ಮೈಸೂರು,ಸೆಪ್ಟಂಬರ್,6, 2024 (www.justkannada.in): ಎಂಟು ತಿಂಗಳ ಗರ್ಭಿಣಿ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕನಕಗಿರಿಯಲ್ಲಿ ಈ ಘಟನೆ ನಡೆದಿದೆ. ಚೈತ್ರಾ ಅಲಿಯಾಸ್ ಚಿಕ್ಕದೇವಿ (23) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಚೈತ್ರ ಪತಿ ಶರತ್‌ ರಾಜುವನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಎರಡು ವರ್ಷಗಳ ಹಿಂದೆ ಕನಕಗಿರಿಯ ಶರತ್‌ರಾಜು ಎಂ ಎಂಬುವರನ್ನು ಚೈತ್ರ ವಿವಾಹವಾಗಿದ್ದರು. ಇದೀಗ ಗಂಡ ಶರತ್ ರಾಜು ಎಂ, ಮಾವ ಮುತ್ತುರಾಜ್, ಅತ್ತೆ ಪದ್ಮ, ಚಿಕ್ಕತ್ತೆ ಮಂಜುವಿರುದ್ದ ವರದಕ್ಷಿಣೆ  ಕಿರುಕುಳ ಆರೋಪ ಕೇಳಿಬಂದಿದ್ದು,  ಕಿರುಕುಳ ತಾಳಲಾರದೆ ಚೈತ್ರ ಅಲಿಯಾಸ್ ಚಿಕ್ಕದೇವಿ ಆತ್ಮಹತ್ಯೆ ಶರಣಾಗಿದ್ದು ನಾಲ್ವರ ವಿರುದ್ದ ಚೈತ್ರಾ ಪೋಷಕರು  ದೂರು ನೀಡಿದ್ದಾರೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: 8 months, pregnant, woman, suicide, Mysore