Saturday, August 22, 2026

BDA Apartments

Home Crime ಆನ್ ಲೈನ್ ನಲ್ಲಿ ಹೂಡಿಕೆ, ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು

ಆನ್ ಲೈನ್ ನಲ್ಲಿ ಹೂಡಿಕೆ, ಹಣ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣು

ಶಿವಮೊಗ್ಗ,ಆಗಸ್ಟ್,24,2024 (www.justkannada.in): ಹಣ ಒನ್ ಟು ಡಬಲ್ ಆಗುತ್ತದೆಂದು ನಂಬಿ ಆನ್ ಲೈನ್ ನಲ್ಲಿ ಹೂಡಿಕೆ ಮಾಡಿದ ಯುವಕನೊಬ್ಬ ಹಣ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಭದ್ರಾವತಿ ನಗರದ ಪೇಪರ್ ಟೌನ್ ಲೇಔಟ್ ನಿವಾಸಿ ಪ್ರದೀಪ್ (27) ಆತ್ಮಹತ್ಯೆಗೆ ಶರಣಾದ ಯುವಕ. ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರದೀಪ್, ಆನ್‌ ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್ ಆಗುತ್ತದೆ ಎಂದು  ನಂಬಿ ಸುಮಾರು ಕಡೆ ಸಾಲ ಮಾಡಿ  91 ಸಾವಿರ ರೂ.  ಹೂಡಿಕೆ ಮಾಡಿದ್ದನು.

ಆದರೆ ಹಣ ವಾಪಸ್ ಬಾರದ ಹಿನ್ನೆಲೆಯಲ್ಲಿ  ಪ್ರದೀಪ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  young man, suicide , investing, online