Sunday, August 23, 2026

BDA Apartments

Home Front Page ನಾಳೆ ಅರಮನೆ ಆವರಣಕ್ಕೆ ದಸರಾ ಗಜಪಡೆ: ಸಾಂಪ್ರದಾಯಿಕ ಸ್ವಾಗತಕ್ಕೆ ಸಕಲ ಸಿದ್ದತೆ

ನಾಳೆ ಅರಮನೆ ಆವರಣಕ್ಕೆ ದಸರಾ ಗಜಪಡೆ: ಸಾಂಪ್ರದಾಯಿಕ ಸ್ವಾಗತಕ್ಕೆ ಸಕಲ ಸಿದ್ದತೆ

 ಮೈಸೂರು,ಆಗಸ್ಟ್,22,2024 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿ ಅರಣ್ಯಭವನದಲ್ಲಿ ಬೀಡುಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ನಾಳೆ ಅರಮನೆ ಆವರಣಕ್ಕೆ ಪ್ರವೇಶಿಸಲಿವೆ.

ನಾಳೆ 10.10 ನಿಮಿಷದಿಂದ 10.30 ರ ಶುಭ ಗಳಿಗೆಯಲ್ಲಿ ಅರಮನೆಗೆ ಗಜಪಡೆ ಪ್ರವೇಶಿಸಲಿದ್ದು, ಗಜಪಡೆಯನ್ನ ಸಾಂಪ್ರದಾಯಿಕವಾಗಿ ಸ್ವಾಗತಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಅರಮನೆ ಆವರಣದಲ್ಲಿ ಗಜಪಡೆ, ಕಾವಾಡಿ,ಮಾವುತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಆನೆಗಳು ತಂಗಲು, ಮತ್ತು ಕಾವಾಡಿ, ಮಾವುತರಿಗೆ  ತಾತ್ಕಾಲಿಕ ಟೆಂಟ್ ನಿರ್ಮಾಣ ಮಾಡಲಾಗಿದೆ. ಅರಮನೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ನಡೆಯುತ್ತಿದೆ.

ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದ್ದು ಒಂದುವರೆ ತಿಂಗಳಿಗೂ ಮೊದಲೆ ಗಜಪಡೆ ಮೈಸೂರಿಗೆ ಆಗಮಿಸಿವೆ. ಗಜಪಡೆ ಆನೆಗಳಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ನಿತ್ಯ ತಾಲೀಮು ನಡೆಸಲಾಗುತ್ತದೆ.

Key words: mysore Dasara, palace,  traditional welcome, gajapade