Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Cinema ರಿಷಬ್ ಶೆಟ್ಟಿಗೆ ಉತ್ತಮ ನಟ ಪ್ರಶಸ್ತಿ: ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ ನಟ ಯಶ್

ರಿಷಬ್ ಶೆಟ್ಟಿಗೆ ಉತ್ತಮ ನಟ ಪ್ರಶಸ್ತಿ: ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ ನಟ ಯಶ್

ಬೆಂಗಳೂರು,ಆಗಸ್ಟ್,16,2024 (www.justkannada.in):  ಇಂದು 70ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ನ್ಯಾಷನಲ್ ಅವಾರ್ಡ್ ನಲ್ಲಿ ಕನ್ನಡ ಚಿತ್ರಗಳು ದರ್ಬಾರ್ ನಡೆಸಿದೆ. ಹೌದು,   ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಹಾಗೂ ಯಶ್ ನಟನೆಯ ಕೆಜಿಎಫ್ ಚಿತ್ರಗಳಿಗೆ ಎರಡೆರಡು ರಾಷ್ಟ್ರ ಪ್ರಶಸ್ತಿ ಲಭ್ಯವಾಗಿದ್ದು, ಕನ್ನಡಕ್ಕೆ ಒಟ್ಟು ಆರು ಪ್ರಶಸ್ತಿ ಲಭಿಸಿದೆ.

ಈ ಮಧ್ಯೆ ನಟ ರಿಷಬ್ ಶೆಟ್ಟಿಗೆ ಕಾಂತಾರ ಚಿತ್ರದಲ್ಲಿ ಅಭಿನಯಕ್ಕೆ ಉತ್ತಮ ನಟ ಪ್ರಶಸ್ತಿ ಒಲಿದಿದೆ. ಈ ಹಿನ್ನೆಲೆಯಲ್ಲಿ ನಟ ರಿಷಬ್ ಶೆಟ್ಟಿ ಸೇರಿ ಪ್ರಶಸ್ತಿಗೆ ಭಾಜನರಾದವರಿಗೆ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಟ ಯಶ್,  ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಂತ ಎಲ್ಲರಿಗೂ ಹೃದಯ ಪೂರ್ವಕವಾದಂತ ಶುಭಾಶಯಗಳು. ವಿಶೇಷವಾಗಿ ಕನ್ನಡದ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಕಾಂತಾರ ಚಿತ್ರದ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ‘ಕಾಂತಾರಾ’ ಮತ್ತು ‘ಕೆಜಿಎಫ್ 2’ ಚಿತ್ರಗಳಿಗೆ ಸೂಕ್ತ ಮನ್ನಣೆ ನೀಡಿದ ನಮ್ಮ ರಿಷಬ್ ಶೆಟ್ಟಿ, ವಿ.ಕಿರಗಂದೂರು, ಪ್ರಶಾಂತ್ ನೀಲ್ ಮತ್ತು ಇಡೀ ಹೊಂಬಾಳೆ ಚಿತ್ರತಂಡಕ್ಕೆ ವಿಶೇಷ ಅಭಿನಂದನೆಗಳು. ಇಲ್ಲಿ ಇನ್ನೂ ಅನೇಕ ಎತ್ತರಗಳಿವೆ. ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ! ಎಂದು  ನಟ ಹರ್ಷ ವ್ಯಕ್ತಪಡಿಸಿದ್ದಾರೆ.

Key words: National award, Rishabh Shetty, Actor, Yash, congratulated