Saturday, August 15, 2026

BDA Apartments

Home Front Page ನಾಳೆ ವೈದ್ಯರ ಮುಷ್ಕರಕ್ಕೆ IMA ಕರೆ:  ಜನರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲಿ- ಸಚಿವ ದಿನೇಶ್ ಗುಂಡೂರಾವ್

ನಾಳೆ ವೈದ್ಯರ ಮುಷ್ಕರಕ್ಕೆ IMA ಕರೆ:  ಜನರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲಿ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಆಗಸ್ಟ್,16,2024 (www.justkannada.in):  ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ನಾಳೆ ವೈದ್ಯರ ಮುಷ್ಕರಕ್ಕೆ IMA ಕರೆ ನೀಡಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,  ಜನರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲಿ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ನಾಳೆ ಖಾಸಗಿ ಆಸ್ಪತ್ರೆಯ ವೈದ್ಯರು ಮುಷ್ಕರಕ್ಕ ಕರೆ ನೀಡಿದ್ದಾರೆ. ಮೊನ್ನೆ ಪ್ರಿನ್ಸಿಪಲ್ ಸೆಕ್ರೆಟರಿ ಜೊತೆ  ಮಾತನಾಡಿದ್ದೇನೆ.  ಏನೆಲ್ಲ ಕ್ರಮ ಕೈಗೊಳ್ಳಲು ಸಾಧ್ಯ  ಎಂದು ಚರ್ಚೆ ಮಾಡಲಾಗಿದೆ ಎಂದರು.

ಪ್ರತಿಭಟನೆ ಮಾಡಲಿ, ಅಭಿಪ್ರಾಯ ವ್ಯಕ್ತಪಡಿಸಲಿ. ಆದರೆ ಜನರಿಗೆ ತೊಂದರೆಯಾಗಬಾರದು. ಹೀಗಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ  ನೀಡಿದ್ದೇನೆ. ಎಲ್ಲಾ ಅಸೋಸಿಯೇಷನ್ ಸಭೆ ಕರೆದು ಕ್ರಮದ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದರು.

Key words: doctor, strike, tomorrow, Minister, Dinesh Gundurao