Wednesday, August 5, 2026

BDA Apartments

Home Crime ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು: ನಾಲ್ವರು ಸಾವು

ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲು: ನಾಲ್ವರು ಸಾವು

ಉತ್ತರ ಪ್ರದೇಶ,ಜುಲೈ,18,2024 (www.justkannada.in):  ಉತ್ತರ ಪ್ರದೇಶದ  ಗೊಂಡಾದಲ್ಲಿ ದಿಬ್ರುಗಢ ಎಕ್ಸ್‌ಪ್ರೆಸ್‌ ನ 15 ಬೋಗಿಗಳು ಹಳಿತಪ್ಪಿದ್ದು, ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೋತಿಗಂಜ್‌- ಜಿಲ್ಹಾಹಿ ರೈಲು ನಿಲ್ದಾಣಗಳ ನಡುವೆ 15904 ಸಂಖ್ಯೆಯ ಚಂಡೀಗಢ- ದಿಬ್ರುಗಢ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸ್ಥಳದಲ್ಲಿ 40 ಜನರ ವೈದ್ಯಕೀಯ ತಂಡ ಮತ್ತು 15 ಆಂಬುಲೆನ್ಸ್‌ಗಳಿವೆ. ಇನ್ನಷ್ಟು ವೈದ್ಯಕೀಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಸ್ಥಳಕ್ಕೆ ಧಾವಿಸುತ್ತಿದೆ ಎಂದು ಉತ್ತರ ಪ್ರದೇಶ ವಿಪತ್ತು ನಿರ್ವಹಣಾ ಪರಿಹಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Key words: Express, train, Derailed, Four dead