Sunday, September 20, 2026

BDA Apartments

ರಮೇಶ್ ಜಾರಕಿಹೊಳಿ ಆರ್ಥಿಕವಾಗಿ ಖಾಲಿ ಖಾಲಿ: ಅವರು ಕಳೆದುಕೊಂಡ ವಸ್ತುವಿನ ಬಗ್...
Home Front Page ರಮೇಶ್ ಜಾರಕಿಹೊಳಿ  ಆರ್ಥಿಕವಾಗಿ ಖಾಲಿ ಖಾಲಿ: ಅವರು ಕಳೆದುಕೊಂಡ ವಸ್ತುವಿನ ಬಗ್ಗೆ ಬಹಿರಂಗ ಮಾಡ್ತೇವೆ-  ಮಾಜಿ...

ರಮೇಶ್ ಜಾರಕಿಹೊಳಿ  ಆರ್ಥಿಕವಾಗಿ ಖಾಲಿ ಖಾಲಿ: ಅವರು ಕಳೆದುಕೊಂಡ ವಸ್ತುವಿನ ಬಗ್ಗೆ ಬಹಿರಂಗ ಮಾಡ್ತೇವೆ-  ಮಾಜಿ ಸಚಿವ ಸತೀಶ್ ಜಾರಕಿಹೊಳಿ…

ಬೆಳಗಾವಿ,ಸೆ,20,2019(www.justkannada.in):  ರಮೇಶ್ ಜಾರಕಿಹೊಳಿ ಈಗ ಆರ್ಥಿಕವಾಗಿ ಖಾಲಿ ಖಾಲಿಯಾಗಿದ್ದಾರೆ.  ನಾನು ಸಾಲಗಾರ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಸರ್ಕಾರ ಕೆಡವಿ ನನಗಿಂತ ದೊಡ್ಡವರಾಗಿದ್ದಾರೆ. ಅವರು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿರಾಗುತ್ತಾರೆ. ನನಗೆ ಈ ಬಗ್ಗೆ 99% ನಂಬಿಕೆ ಇದೆ. ಅವರು ಆರ್ಥಿಕವಾಗಿ ಖಾಲಿ ಖಾಲಿಯಾಗಿದ್ದಾರೆ. ರಮೇಶ್ ಅವರ ಆಸ್ತಿಯನ್ನ ಅವರ ಅಳಿಯ ತೆಗೆದುಕೊಂಡು ಹೋಗಿದ್ದಾನೆ ಎಂದು ಹೇಳಿದರು.

ಗೋಕಾಕ್ ನಲ್ಲಿ ಕಾಂಗ್ರೆಸ್ ನಿಂದ ದೊಡ್ಡ ಸಮಾವೇಶ ಮಾಡುತ್ತೇವೆ.  ರಮೇಶ್ ಜಾರಕಿಹೊಳಿ ಕಳೆದುಕೊಂಡಿರುವ ವಸ್ತುವಿನ ಬಗ್ಗೆ ಸಮಾವೇಶದಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

Key words: Ramesh jarakiholi –Financially- Empty – Former minister- Satish Jarakiholi