Saturday, August 22, 2026

BDA Apartments

Home Front Page ನನ್ನ ಹೇಳಿಕೆ ಕಡತದಿಂದ ತೆಗೆದು ಹಾಕಬಹುದು: ಸತ್ಯವನ್ನ ಮುಚ್ಚಿಡಲು ಸಾಧ್ಯವಿಲ್ಲ- ರಾಹುಲ್ ಗಾಂಧಿ

ನನ್ನ ಹೇಳಿಕೆ ಕಡತದಿಂದ ತೆಗೆದು ಹಾಕಬಹುದು: ಸತ್ಯವನ್ನ ಮುಚ್ಚಿಡಲು ಸಾಧ್ಯವಿಲ್ಲ- ರಾಹುಲ್ ಗಾಂಧಿ

ನವದೆಹಲಿ,ಜುಲೈ,2,2024 (www.justkannada.in): ಲೋಕಸಭೆಯಲ್ಲಿ ನಿನ್ನೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣದ ಕೆಲ ಅಂಶಗಳನ್ನ ಕಡತದಿಂದ ತೆಗೆದು ಹಾಕಲಾಗಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ನನ್ನ ಹೇಳಿಕೆ ಕಡತದಿಂದ ತೆಗೆದು ಹಾಕಬಹುದು. ಆದರೆ ತುಂಬಾದಿನ ಸತ್ಯವನ್ನ ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಾಹುಲ್ ಗಾಂಧಿ,  ಸತ್ಯವನ್ನ ತುಂಬಾ ದಿನ ಮುಚ್ಚಡಲು ಆಗಲ್ಲ ನನ್ನ ಹೇಳಿಕೆಗೆ ನಾನು ಈಗಲೂ ಬದ್ದ. ನಾನು ಆಡಿದ ಮಾತಿಗೆ ನಾನು ಕ್ಷಮೆ ಕೇಳಲ್ಲ ನನ್ನ ಹೇಳಿಕೆಯನ್ನ ಕಡತದಿಂದ ತೆಗೆದು ಹಾಕಲಾಗಿದೆ ಆದರೆ ಸತ್ಯವನ್ನ ಎಂದಿಗೂ ತೆಗೆದುಹಾಕಲು ಸಾಧ್ಯವಿಲ್ಲ ಎಂದರು.

ಮೋದಿಜಿ ಅವರ ಜಗತ್ತಿನಲ್ಲಿ ಸತ್ಯವನ್ನು ತೆಗೆದುಹಾಕಬಹುದು ಆದರೆ ವಾಸ್ತವದಲ್ಲಿ ಅಲ್ಲ. ನಾನು ಏನು ಹೇಳಬೇಕೋ ಅದನ್ನು ಹೇಳಿದೆ, ಅದು ಸತ್ಯ. ಅವರು ಬಯಸಿದಷ್ಟು ತೆಗೆದುಹಾಕಬಹುದು. ಸತ್ಯವೇ ಸತ್ಯ” ಎಂದು ರಾಹುಲ್ ಗಾಂಧಿ ತಿಳಿಸಿದರು.

Key words: Lokasabha, statement, removed, file, Rahul Gandhi