Sunday, August 23, 2026

BDA Apartments

Home Front Page ರಾಹುಲ್ ಗಾಂಧಿ ಹೇಳಿಕೆಗೆ ವಿರೋಧಿಸಿದ ಬಿಜೆಪಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್

ರಾಹುಲ್ ಗಾಂಧಿ ಹೇಳಿಕೆಗೆ ವಿರೋಧಿಸಿದ ಬಿಜೆಪಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟಾಂಗ್

ಬೆಂಗಳೂರು,ಜುಲೈ,2,2024 (www.justkannada.in):  ನಿನ್ನೆ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ ಭಾಷಣದ ಬಗ್ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಹುಲ್ ಗಾಂಧಿ ಅವರ ಭಾಷಣವನ್ನ ಬಿಜೆಪಿಯವರು ಅರ್ಥ ಮಾಡಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಬಿಜೆಪಿಯವರು ರಾಹುಲ್ ಗಾಂಧಿ ಅವರ ಭಾಷಣವನ್ನ ಅರ್ಥ ಮಾಡಿಕೊಂಡಿಲ್ಲ. ಎಲ್ಲಾ ಧರ್ಮವನ್ನ ಸಮಾನವಾಗಿ ಕಾಣಬೇಕು ಅಂದಿದ್ದಾರೆ. ಅದು ಯಾರಿಗೆ ಅನ್ವಯ ಆಗಬೇಕೋ ಅವರಿಗೆ ಅನ್ವಯ ಆಗುತ್ತೆ. ಬಿಜೆಪಿಗೆ ಅನ್ವಯವಾಗುತ್ತೆ ಅಂದರೆ ಅನ್ವಯವಾಗುತ್ತೆ ಎಂದರು.

ಇನ್ನು ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಅತಿಥ್ಯ ಆರೋಪ  ಕೇಳಿ ಬಂದ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ದರ್ಶನ್ ಗೆ ವಿಶೇಷ ಸತ್ಕಾರ ನೀಡಿಲ್ಲ ದರ್ಶನ್ ಗೆ ಬಿರಿಯಾನಿ ಎಲ್ಲಾ ಕೊಡುತ್ತಿಲ್ಲ ಬೇಕಿದ್ದರೆ ನನ್ನ ಜೊತೆ ಬಂದು ಪರಿಶೀಲಿಸಬಹುದು ಎಂದು ಸ್ಪಷ್ಟಪಡಿಸಿದರು.

Key words: BJP, opposes, Rahul Gandhi, statement, Dr. G. Parameshwar