Wednesday, August 26, 2026

BDA Apartments

Home Front Page ಟೀಕೆ ಮಾಡುವುದಕ್ಕೂ ಕೂಡ ಒಂದು ಲೆವೆಲ್ ಇರಲಿ- ವಿಪಕ್ಷಗಳಿಗೆ ಸಚಿವ ಸಂತೋಷ್ ಲಾಡ್ ಟಾಂಗ್

ಟೀಕೆ ಮಾಡುವುದಕ್ಕೂ ಕೂಡ ಒಂದು ಲೆವೆಲ್ ಇರಲಿ- ವಿಪಕ್ಷಗಳಿಗೆ ಸಚಿವ ಸಂತೋಷ್ ಲಾಡ್ ಟಾಂಗ್

ಬೆಂಗಳೂರು,ಜೂನ್,25,2024 (www.justkannada.in): ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಿರುವ ಹಿನ್ನೆಲೆ ಸರ್ಕಾರದ ನಡೆಯನ್ನ ಟೀಕಿಸಿದ ವಿಪಕ್ಷಗಳಿಗೆ ಸಚಿವ ಸಂತೋಷ್ ಲಾಡ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ದೇಶದಲ್ಲಿ ಏನೇನು ಏರಿಕೆ ಆಗಿದೆ ಎಂದು  ವಿರೋಧ ಪಕ್ಷದವರು ಮಾತನಾಡಲ್ಲ. ನಾವು ದರ ಹೆಚ್ಚಳ ಮಾಡಿದ್ದರ ಬಗ್ಗೆ ಮಾತನಾಡುತ್ತಾರೆ.  ಕಳೆದ 10 ವರ್ಷದಲ್ಲಿ ಏನೇನು ಹೆಚ್ಚಳವಾಗಿದೆ ಹೇಳಲಿ ಎಂದು ಆಗ್ರಹಿಸಿದರು.

ಟೀಕೆ ಮಾಡುವುದಕ್ಕೂ ಕೂಡ ಒಂದು ಲೆವೆಲ್ ಇರಲಿ. ಸುಮ್ಮನೆ ಟೀಕೆ ಮಾಡೊದು ಸರಿಯಲ್ಲ. ರಾಜ್ಯದ ಅಭಿವೃದ್ದಿಗೋಸ್ಕರ ದರ ಏರಿಕೆ ಮಾಡಲಾಗಿದೆ. ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.

Key words: milk-prise-hike- Minister – Santosh Lad