Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಮೈಸೂರಿನಲ್ಲಿ ಈದ್ ಮಿಲಾದ್ ಆಚರಣೆ: ಭಾವೈಕ್ಯತೆಯ ಸಂದೇಶ ಸಾರಿದ ಹಿಂದೂ-ಮುಸ್ಲಿಂ ಬಾಂಧವರು.

ಮೈಸೂರಿನಲ್ಲಿ ಈದ್ ಮಿಲಾದ್ ಆಚರಣೆ: ಭಾವೈಕ್ಯತೆಯ ಸಂದೇಶ ಸಾರಿದ ಹಿಂದೂ-ಮುಸ್ಲಿಂ ಬಾಂಧವರು.

ಮೈಸೂರು,ಆಗಸ್ಟ್,26,2026 (www.justkannada.in): ಇಂದು ಮುಸ್ಲೀಂ ಸಮುದಾಯಕ್ಕೆ ಈದ್ ಮಿಲದ್ ಸಂಭ್ರಮವಾಗಿದ್ದು ಈ ಅಂಗವಾಗಿ  ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ನಗರದ ಜೆಎಲ್‌ ಬಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಅತಿಥಿ ಗೃಹದಲ್ಲಿ ಸೌಹಾರ್ದತೆ ಮತ್ತು ಭಾವೈಕ್ಯತೆಯ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಾಗಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಬಳಿಕ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಹಿಂದೂ ಬಾಂಧವರು ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ರಾಷ್ಟ್ರೀಯ ಏಕತೆಯ ಮಹತ್ವ ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಎರಡೂ ಸಮುದಾಯಗಳ ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ಭಾವೈಕ್ಯತೆಯ ಸಂದೇಶ ಸಾರಿದರು.ಮೈಸೂರಿನಲ್ಲಿ ಈದ್ ಮಿಲಾದ್ ಆಚರಣೆ ed-milad ed milad

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ  ನಜರ್ಬಾದ್ ನಟರಾಜ್,  ಜಿ ರಾಘವೇಂದ್ರ ,ಉತ್ತನಹಳ್ಳಿ ಶಿವಣ್ಣ , ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ರವಿಚಂದ್ರ, ದಿನೇಶ್, ಎಸ್ ಎನ್ ರಾಜೇಶ್, ಯತೀಂದ್ರ, ಮುಸ್ಲೀಂ ಮುಖಂಡರುಗಳಾದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮೈನಾರಿಟಿ ಅಧ್ಯಕ್ಷ  ಆರಿಫ್ ಪಾಷಾ, ಗುಲ್ಶನ್ ಪಾಷಾ, ಶಾಹಿದ್, ಮಹಮ್ಮದ್ ವಾಸಿಮ್, ಮಹಮ್ಮದ್ ಯೂನಿಸ್, ಮೊಹಮ್ಮದ್ ಜನ್ನೀದ್, ಪರ್ಕನ್, ಅಲ್ತಾಫ್, ಅಪ್ರೋಜ್, ಶಭಾಷ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಮೈಸೂರಿನಲ್ಲಿ ಈದ್ ಮಿಲಾದ್ ಆಚರಣೆ jk02_new jk02 new

Key words: Eid Milad, Mysore, Hindu-Muslim, message,  unity