Thursday, August 13, 2026

BDA Apartments

Home Crime ಮೆಕ್ಕಾದಲ್ಲಿ ಬಿಸಿಲಿನ ತಾಪಕ್ಕೆ 922 ಯಾತ್ರಿಕರು ಸಾವು: ಬೆಂಗಳೂರಿನ ಇಬ್ಬರು ಬಲಿ.

ಮೆಕ್ಕಾದಲ್ಲಿ ಬಿಸಿಲಿನ ತಾಪಕ್ಕೆ 922 ಯಾತ್ರಿಕರು ಸಾವು: ಬೆಂಗಳೂರಿನ ಇಬ್ಬರು ಬಲಿ.

ಬೆಂಗಳೂರು,ಜೂನ್,20,2024 (www.justkannada.in): ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರ ಮೆಕ್ಕಾದಲ್ಲಿ ಬಿಸಲಿನ ತಾಪಕ್ಕೆ 922 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೆಕ್ಕಾದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿ ಉಷ್ಣಾಂಶದಿಂದ ಉಂಟಾದ ಸಾವಿನ ಸಂಖ್ಯೆ 900 ದಾಟಿದೆ. ವಾರ್ಷಿಕವಾಗಿ ನಡೆಯುವ ಧಾರ್ಮಿಕ ಆಚರಣೆಗಳಿಗಾಗಿ ಜಗತ್ತಿನ ನಾನಾ ಭಾಗಗಳಿಂದ ಆಗಮಿಸಿದ್ದ ಮುಸ್ಲಿಮರು, ಅತಿಯಾದ ಉಷ್ಣಾಂಶದಿಂದ ಸಾವಿಗೀಡಾಗಿದ್ದಾರೆ.

ಬಿಸಿಲಿನ ತಾಪಕ್ಕ 922 ಯಾತ್ರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ  90 ಭಾರತೀಯರು ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಬೆಂಗಳೂರಿನವರು ಎನ್ನಲಾಗಿದೆ. ಬೆಂಗಳೂರು ನಿವಾಸಿಗಳಾದ ಕೌಸರ್ ರುಕ್ಸಾನಾ ಮತ್ತು  ಮಹಮ್ಮದ್ ಇಲಿಯಾಸ್ ಮೆಕ್ಕಾದಲ್ಲಿ ಬಿಸಿಲಿಗೆ ಬಲಿಯಾಗಿದ್ದಾರೆ ಎನ್ನಲಾಗಿದೆ.

Key words: 922 pilgrims, die, Mecca