Thursday, August 6, 2026

BDA Apartments

Home Crime ಶಾಸಕ ಎಚ್.ಡಿ ರೇವಣ್ಣ ನಿವಾಸದಲ್ಲಿ ಎಸ್ ಐಟಿ ಅಧಿಕಾರಿಗಳಿಂದ ಮಹಜರು.

ಶಾಸಕ ಎಚ್.ಡಿ ರೇವಣ್ಣ ನಿವಾಸದಲ್ಲಿ ಎಸ್ ಐಟಿ ಅಧಿಕಾರಿಗಳಿಂದ ಮಹಜರು.

ಬೆಂಗಳೂರು,ಮೇ,10,2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಸಂತ್ರಸ್ತೆ ಕಿಡ್ನಾಪ್ ಕೇಸ್ ನಲ್ಲಿ ಶಾಸಕ ಹೆಚ್ ಡಿ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು ಈ ನಡುವೆ ಇಂದು ಎಸ್‌ಐಟಿ ಅಧಿಕಾರಿಗಳು  ಶಾಸಕ ಹೆಚ್.ಡಿ ರೇವಣ್ಣ ನಿವಾಸದಲ್ಲಿ ಪಂಚನಾಮೆಯನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನ್ಯಾಯಾಲಯದ ಅನುಮತಿ ಪಡೆದು ಎಸ್ ಐಟಿ ಅಧಿಕಾರಿಗಳು ಬೆಂಗಳೂರಿನ ಬಸವನಗುಡಿಯಲ್ಲಿರುವ  ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ನಿವಾಸದಲ್ಲಿ ಪಂಚನಾಮೆ ನಡೆಸುತ್ತಿದ್ದಾರೆ. 2 ವಾಹನಗಳಲ್ಲಿ 10ಕ್ಕೂ ಹೆಚ್ಚು ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ಹೆಚ್.ಡಿ ರೇವಣ್ಣ ಅವರ ನಿವಾಸದಲ್ಲಿ ಪಂಚನಾಮೆ ನಡೆಸುತ್ತಿದ್ದಾರೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಈಗಾಗಲೇ ಹೊಳೆನರಸೀಪುರದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಅವರ ನಿವಾಸದಲ್ಲಿ ಸಂತ್ರಸ್ತೆ ಮಹಿಳೆಯೊಂದಿಗೆ ತೆರಳಿ  ಸ್ಥಳ ಮಹಜರು ನಡೆಸಿದ್ದರು. ಇಂದು ಸಹ ಎಸ್‌ಐಟಿ ಅಧಿಕಾರಿಗಳು ಈ ಪ್ರಕ್ರಿಯೆ ಮುಂದುವರೆಸಿದ್ದಾರೆ. ನಿವಾಸದ ಬಳಿ ಪೊಲೀಸ್ ಭದ್ರತೆ ವಹಿಸಲಾಗಿದೆ.

Key words: SIT, officials, MLA ,HD Revanna, residence