Sunday, September 20, 2026

BDA Apartments

ಬಿಜೆಪಿ ಮುಖಂಡ ,ವಕೀಲ ದೇವರಾಜೇಗೌಡ ವಿರುದ್ದ ದೂರು ದಾಖಲು BDA JK_Adv BDA Adv
Home Crime ಬಿಜೆಪಿ ಮುಖಂಡ ,ವಕೀಲ ದೇವರಾಜೇಗೌಡ ವಿರುದ್ದ ದೂರು ದಾಖಲು.

ಬಿಜೆಪಿ ಮುಖಂಡ ,ವಕೀಲ ದೇವರಾಜೇಗೌಡ ವಿರುದ್ದ ದೂರು ದಾಖಲು.

ಬೆಂಗಳೂರು,ಮೇ,10,2024 (www.justkannada.in):  ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧ ಕಾಂಗ್ರೆಸ್ ವಿರುದ್ದ ಪೆನ್ ಡ್ರೈವ್ ಹಂಚಿಕೆ ಕುರಿತು ಆರೋಪ ಮಾಡಿದ್ದ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ವಿರುದ್ದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಪಶ್ಚಿಮ ಕೆಪಿಸಿಸಿ ಪ್ರಚಾರ ಸಮಿತಿಯು ಬಿಜೆಪಿಯ ಮುಖಂಡ ಹಾಗೂ ವಕೀಲ ದೇವರಾಜೇಗೌಡ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಪೆನ್ ಡ್ರೈವ್ ಹಂಚಿಕೆ ಕುರಿತು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶೀ ಎಸ್.ಮನೋಹರ್ ನೇತೃತ್ವದಲ್ಲಿ ದೂರು ನೀಡಲಾಗಿದೆ.ಬಿಜೆಪಿ ಮುಖಂಡ devarajegowda

ದೇವರಾಜೇಗೌಡ ಬ್ಲಾಕ್ ಮೇಲರ್ ಎಂದು ಈಗಾಗಲೇ ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು ಬಹಿರಂಗವಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಿಸುತ್ತಿದ್ದ ದೇವರಾಜೇಗೌಡರ ಹೀನ ಕೃತ್ಯ ಬಹಿರಂಗವಾಗಿದೆ. ದೇವರಾಜೇಗೌಡ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ದೇವರಾಜೇಗೌಡ ನೈಜ ಚಿತ್ರಣ ಹಿನ್ನೆಲೆ ಬಹಿರಂಗಪಡಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್  ಆಗ್ರಹಿಸಿದ್ದಾರೆ.

Key words: File, complaint, against, Devaraj Gowda