Wednesday, September 30, 2026

BDA Apartments

ಹೆಚ್.ಡಿ ರೇವಣ್ಣ ವಿರುದ್ದ ಕಿಡ್ನಾಪ್ ಕೇಸ್ ದಾಖಲಾಗಿರುವುದರ ಹಿಂದೆ ‘ಕೈ’ ಶಾಸ...
Home Front Page ಹೆಚ್.ಡಿ ರೇವಣ್ಣ ವಿರುದ್ದ ಕಿಡ್ನಾಪ್ ಕೇಸ್ ದಾಖಲಾಗಿರುವುದರ ಹಿಂದೆ ‘ಕೈ’ ಶಾಸಕನ ಪಾತ್ರ- ಗಂಭೀರ ಆರೋಪ.

ಹೆಚ್.ಡಿ ರೇವಣ್ಣ ವಿರುದ್ದ ಕಿಡ್ನಾಪ್ ಕೇಸ್ ದಾಖಲಾಗಿರುವುದರ ಹಿಂದೆ ‘ಕೈ’ ಶಾಸಕನ ಪಾತ್ರ- ಗಂಭೀರ ಆರೋಪ.

ಹಾಸನ,ಮೇ,6,2024 (www.justkannada.in): ವಿರುದ್ದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರನ್ನ ಎಸ್ ಐಟಿ ಬಂಧಿಸಿದ್ದು ಈ ಪ್ರಕರಣ ದಾಖಲಾಗುವುದರ ಹಿಂದೆ ಕೆ.ಆರ್ ನಗರ ಕಾಂಗ್ರೆಸ್ ಶಾಸಕರ ಪಾತ್ರವಿದೆ ಎಂದು ಹಾಸನ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್‌.ಲಿಂಗೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್‌.ಲಿಂಗೇಶ್‌, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣದ ದೂರನ್ನು ಕೆ.ಆರ್‌.ನಗರ ಶಾಸಕರು ಕೊಡಿಸಿದ್ದಾರೆ. ಕೆ.ಆರ್‌.ನಗರದ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರ ವಿರುದ್ಧ ದೂರು ದಾಖಲಾಗುವುದರ ಹಿಂದೆ ಅಲ್ಲಿನ ಶಾಸಕರ ಪಾತ್ರವಿದೆ ಎಂದಿದ್ದಾರೆ.ಹೆಚ್.ಡಿ ರೇವಣ್ಣ ವಿರುದ್ದ ಕಿಡ್ನಾಪ್ ಕೇಸ್ ದಾಖಲಾಗಿರುವುದರ ಹಿಂದೆ ‘ಕೈ’ ಶಾಸ...

ಪ್ರಕರಣ ಎಸ್ ಐಟಿಗೆ ನೀಡಿರುವುದು ಸ್ವಾಗತ. ಆದರೆ ಎಸ್ ಐಟಿ ತನಿಖೆ ದಿಕ್ಕು ತಪ್ಪುತ್ತಿದೆ.  ಪೆನ್‌ಡ್ರೈವ್‌ ಹಂಚಿದವರ ಬಗ್ಗೆ ತನಿಖೆ ಮಾಡದೇ ಹೆಚ್ ಡಿ ರೇವಣ್ಣ ಅವರನ್ನ ಬಂಧಿಸಿದ್ದಾರೆ .  ಹೆಚ್ ಡಿ ರೇವಣ್ಣ ಹಣಿಯಲು ಎಸ್‌ಐಟಿ ಅನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

Key words: HD Revanna, kidnap case, congress, MLA