Sunday, September 27, 2026

BDA Apartments

ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ- ಪ್ರಜ್ವಲ್ ರೇವಣ್ಣ ಮಾಜಿ ಕಾ...
Home Crime ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ- ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಹೇಳಿಕೆ.

ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ- ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಹೇಳಿಕೆ.

ಬೆಂಗಳೂರು,ಏಪ್ರಿಲ್,30,2024 (www.justkannada.in): ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಎಂಬುವವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಕಾರು ಚಾಲಕ ಕಾರ್ತಿಕ್, ಬಿಜೆಪಿ ಮುಖಂಡ ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ. ಇವರಿಗೆ ಬಿಟ್ಟು ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕರಿಗೆ ಪ್ರಜ್ವಲ್ ವಿಡಿಯೋ ಕೊಟ್ಟಿಲ್ಲ.  ಡಿಕೆಶಿ ಡಿಕೆ ಸುರೇಶ್ ಗೆ ಪೆನ್ ಡ್ರೈವ್ ಕೊಟ್ಟಿದ್ದಾಗಿ ಹೇಳಿದ್ದಾರೆ.  ಆದರೆ ನಾನು ಕೊಟ್ಟಿಲ್ಲ. ದೇವೇರಾಜೇಗೌಡರನ್ನ ನಂಬಿ ವಿಡಿಯೋ ನೀಡಿದ್ದೆ.  ಆದರೆ ಅದನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ karthik

ಕಳೆದ 15 ವರ್ಷದಿಂದ  ಕಾರು ಚಾಲಕನಾಗಿ ಕೆಲಸ ಮಾಡಿದ್ದೆ. ಒಂದು ವರ್ಷದಿಂದ ನಾನು ಕೆಲಸ ಬಿಟ್ಟಿದ್ದೇನೆ ನನ್ನ ಮೇಲೆ ದೌರ್ಜನ್ಯ ಮಡಿ ನಮ್ಮ ಜಮೀನು ಬರೆಸಿಕೊಂಡಿದ್ರು ಹೆಂಡತಿ ಮೇಲೆ  ಹಲ್ಲೆ ಮಾಡಿದ್ರು. ಹೀಗಾಗಿ ಕೆಲಸ ಬಿಟ್ಟಿದ್ದೆ.   ಅವರ ವಿರುದ್ದ ಕೇಸ್ ಹಾಕಿ ಹೋರಾಟಕ್ಕೆ ಸಿದ್ದನಾಗಿದ್ದೆ ದೇವರಾಜೇಗೌಡರ ವಿಚಾರ ಗೊತ್ತಾಗಿ ಅವರ ಬಳಿ ಹೇಳಿಕೊಂಡಿದ್ದೆ.  ನನಗಾದ ಅನ್ಯಾಯಕ್ಕೆ ನ್ಯಾಯಕೊಡಿಸುವ ಭರವಸೆ ನೀಡಿದ್ದರು.  ಆದರೆ ದೇವರಾಜೇಗೌಡರು ಕೇಸ್ ತೆಗೆದುಕೊಳ್ಳಲಿಲ್ಲ. ಈಗ ನಾನು ಬೇರೆ ಲಾಯರ್ ಮೂಲಕ ಕೇಸ್ ಹಾಕಿದೆ ಎಂದಿದ್ದಾರೆ.

Key words: Devarajegowda, pen drive, Prajwal Revanna