Sunday, September 27, 2026

BDA Apartments

Home Front Page ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ: ಇದಕ್ಕೆ ಮೋದಿ ಕೂಡ ಉತ್ತರಿಸಬೇಕು-ಡಿ.ಕೆ ಸುರೇಶ್.

ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ: ಇದಕ್ಕೆ ಮೋದಿ ಕೂಡ ಉತ್ತರಿಸಬೇಕು-ಡಿ.ಕೆ ಸುರೇಶ್.

ಬೆಂಗಳೂರು,ಏಪ್ರಿಲ್,30,2024 (www.justkannada.in):  ಹಾಸನ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದು ಪ್ರಕರಣ ಸಂಬಂಧ ಪ್ರಧಾನಿ ಮೋದಿ ಕೂಡ ಉತ್ತರಿಸಬೇಕು ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಸುರೇಶ್,  ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ. ಹೀಗಾಗಿ ಪ್ರಧಾನಿ ಮೋದಿ ಕೂಡ ಉತ್ತರಿಸಬೇಕು. ಹೆಚ್ ಡಿಡಿ ಕುಟುಂಬದಿಂದ ಅನ್ಯಾಯವಾಗಿದೆ. ಇದು ಇಡೀ ದೇಶ, ಕರ್ನಾಟಕ ತಲೆ ತಗ್ಗಿಸುವ ಕೆಲಸ ಆಗಿದೆ  ಎಂದು ಕಿಡಿಕಾರಿದರು.ಪ್ರಜ್ವಲ್ ರೇವಣ್ಣ ಎನ್ ಡಿಎ ಅಭ್ಯರ್ಥಿ dk suresh

ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು  ಹೆಚ್.ಡಿ ಕುಮಾರಸ್ವಾಮಿ ಹೇಳುತ್ತಾರೆ.  ಬೇಕಾದಾಗ ಒಂದು ಬೇಡದೆ ಇದ್ದಾಗ ಇನ್ನೊಂದು ಹೇಳೋದು ಸರಿಯಲ್ಲ ಎಂದು ಡಿ.ಕೆ ಸುರೇಶ್ ಕುಟುಕಿದರು.

Key words: Prajwal Revanna-NDA -candidate: Modi – answer – DK Suresh.