Wednesday, August 12, 2026

BDA Apartments

Home Front Page ಪ್ರಧಾನಿ ಮೋದಿ ಮಂಗಳ ಸೂತ್ರದ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ.

ಪ್ರಧಾನಿ ಮೋದಿ ಮಂಗಳ ಸೂತ್ರದ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ.

ಕಲ್ಬುರ್ಗಿ,ಏಪ್ರಿಲ್,24,2024 (www.justkannada.in): ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಂದರೆ ಮಾಂಗಲ್ಯ ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ ಅವರು ಮಂಗಳ ಸೂತ್ರವನ್ನೂ ಬಿಡುತ್ತಿಲ್ಲ. ಮೋದಿ ಸಹ ಕರಿಮಣಿ ಮಾಲಿಕರಾಗಿದ್ದಾರಲ್ಲ ಮೋದಿಗೆ ಮಂಗಳ ಸೂತ್ರದ ಬೆಲೆ ಗೊತ್ತಾ..? ದೇಶಕ್ಕಾಗಿ ಸೋನಿಯಾ ಗಾಂಧಿ ಮಂಗಳ ಸೂತ್ರ ಬಲಿಕೊಟ್ರು ಎಂದರು.

ಚುನಾವಣಾ ಆಯೋಗದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ,  ರಾಜ್ಯದಲ್ಲಿ ಚುನಾವಣಾ ಆಯೋಗ ಮಲಗಿದೆಯಾ..?  ಮೋದಿಯ ದ್ವೇಷದ ಭಾಷಣದ ವಿರುದ್ದ ಯಾಕೆ ಕ್ರಮ ಇಲ್ಲ ಮೋದಿಗೆ ಆಯೋಗ ಒಂದು ಒಂದು ನೋಟಿಸ್ ಕೊಟ್ಟಿಲ್ಲ. ರಾಜ್ಯದಲ್ಲಿ ಚುನಾವಣೆ ಎಲ್ಲರಿಗೂ ಸಮಾನವಗಿ ನಡೆಯತಿಲ್ಲ. ಆಯೋಗ ಮೋದಿ ಮೇಲೆ ದೂರು ದಾಖಲಿಸಿಕೊಳ್ಳುತ್ತಿಲ್ಲ. ಚುನಾವಣಾ ಆಯೋಗ ಕೇಂದ್ರವನ್ನ ರಕ್ಷಿಸುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Key words:  Minister, Priyank Kharge, PM Modi