Tuesday, August 11, 2026

BDA Apartments

Home Election 2024 ಬಿಜೆಪಿ ಅಭ್ಯರ್ಥಿ ಯದುವೀರ್ ಗೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಶುಭ ಕೋರಿದ ವ್ಯಾಪಾರಿಗಳು.

ಬಿಜೆಪಿ ಅಭ್ಯರ್ಥಿ ಯದುವೀರ್ ಗೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಶುಭ ಕೋರಿದ ವ್ಯಾಪಾರಿಗಳು.

ಮೈಸೂರು,24,2024 (www.justkannada.in):  ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಕಾವು ಬಿರು ಬಿಸಿಲಿಗಿಂತ ಹೆಚ್ಚಾಗಿದ್ದು, ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದಿದೆ. ಈ ನಡುವೆ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೆ ಎಂ.ಜಿ.ರೋಡ್ ಮಾರುಕಟ್ಟೆಯ ಬಡ ವ್ಯಾಪಾರಿಗಳು ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು ಬಾರಿ ಅಂತರಗಳಿಂದ ಜಯ ಗಳಿಸುವುದು ನಿಶ್ಚಿತ ಎಂದು ಶುಭ ಕೋರಿದ್ದಾರೆ.

ದಾಖಲೆಯ ತಾಪಮಾನದ ನಡುವೆಯೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.  ಜನರಿಂದಲೂ ಕೂಡಾ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ, ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನೋಡಲು ಜನರು ಕಾದು ಕುಳಿತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು, ಐತಿಹಾಸಿಕ ಹಿನ್ನೆಲೆ ಇರುವ ಒಡೆಯರ್ ಕುಟುಂಬದ ಕುಡಿ ಚುನಾವಣೆಯಲ್ಲಿ ಸ್ಪರ್ಧಿಸಿ ನಮ್ಮ ಸೇವೆ ಮಾಡಲು ಬಂದಿರುವುದೇ ನಮ್ಮ ಸೌಭಾಗ್ಯ ಎನ್ನುವುದು ಜನ ಸಾಮಾನ್ಯರ ಮಾತಾಗಿದೆ.

ಯದುವೀರ್ ಇಂದು ದಿಢೀರ್ ಅಂತ ಎಂ.ಜಿ.ರಸ್ತೆಯ ಮಾರ್ಕೆಟ್ ಗೆ ಭೇಟಿ ನೀಡಿ ಅಲ್ಲಿನ ವ್ಯಾಪಾರಿಗಳನ್ನು ಮಾತನಾಡಿಸಿದರು.  ಈ ಸಂಧರ್ಭದಲ್ಲಿ ಅಲ್ಲಿನ ಬಡ ವ್ಯಾಪಾರಿಗಳು ಈ ಬಾರಿ ನೀವು ಗೆಲ್ಲಿತೀರಾ ನಿಮ್ಮ ಋಣ ತೀರಿಸುತ್ತೇವೆ , ಬಹಳ ಅಂತರದಿಂದ ಗೆದ್ದೆ ಗೆಲ್ಲುತೀರಾ ಎಂದು ಕುಂಬಳಕಾಯಿಯಿಂದ ದೃಷ್ಟಿ ತೆಗೆದು ಶುಭ ಹಾರೈಸಿದರು.

ಎಂಜಿ ರೋಡ್ ಮಾರುಕಟ್ಟೆಯ ವ್ಯಾಪಾರಿಗಳನ್ನು ಭೇಟಿ ಮಾಡಿ ನಂತರ ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ನಡೆಯುವ ರೋಡ್ ಶೋ ನಲ್ಲಿ ಪಾಲ್ಗೊಳ್ಳಲು ಯದುವೀರ್ ಅವರು ನಿರ್ಗಮಿಸಿದರು.

ಯದುವೀರ್ ಒಡೆಯರ್ ಅವರಿಗೆ ಸಾಕಷ್ಟು ಜನಪರ ಕಾಳಜಿ ಇದ್ದು , ಅವರು ಅರಮನೆಯಲ್ಲಿಯೇ ಕುಳಿತುಕೊಂಡೇ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತಲ್ಲಿನರಾಗಿದ್ದರು, ಎಲ್ಲರಿಗೂ ತಿಳಿಯದ ವಿಷಯ ಇದೆ  ಅದೆನೆಂದರೆ ಯದುವೀರ್ ಸಾಕಷ್ಟು ಎನ್.ಜಿ.‌ಓಗಳ ಜೊತೆ ಕೈ ಜೋಡಿಸಿ , ಸರ್ಕಾರಿ ಶಾಲಾ ಮಕ್ಕಳಿಗೆ, ಬಡವರಿಗೆ ಸಹಾಯ  ಮಾಡುವಂತಹ ಕೆಲಸಗಳನ್ನು ಎಲೆಮರೆಕಾಯಿಯಂತೆ ಮಾಡುತ್ತ ಬಂದಿದ್ದಾರೆ.

Key words: Traders, wish, BJP candidate, Yaduveer